ಕೇಶಕ್ಷಾಮ

Author : ಗುರುಪ್ರಸಾದ ಕುರ್ತಕೋಟಿ

Pages 96

₹ 100.00




Year of Publication: 2021
Published by: ಮೈತ್ರಿ ಪ್ರಕಾಶನ
Address: 504, 2ನೇ ಕ್ರಾಸ್ ಎರಡನೇ ಬ್ಲಾಕ್ , ಬಿಎಸ್ ಕೆ ಮೊದಲ ಹಂತ, ಬೆಂಗಳೂರು-560050
Phone: 8317396164

Synopsys

ಲೇಖಕ ಗುರುಪ್ರಸಾದ ಕುರ್ತಕೋಟಿ ಅವರ ಹಾಸ್ಯ ಲೇಖನಗಳ ಸಂಕಲನ-’ಕೇಶಕ್ಷಾಮ’.ಕೃತಿಗೆ ಮುನ್ನುಡಿ ಬರೆದ ಭುವನೇಶ್ವರಿ ಹೆಗಡೆ ‘ ಉತ್ತರ ಕರ್ನಾಟಕದ ಭಾಷೆ , ಉತ್ತರ ಕನ್ನಡದ ಗಪ್ಪಣ್ಣ ಎರಡೂ ಗುರುಪ್ರಸಾದರ ಬರಹಗಳಲ್ಲಿ ಹಾಸ್ಯದ ಸಹಜ ಓಘವನ್ನು ತಂದಿತ್ತಿವೆ. ತಮ್ಮ ಮನೆಯ ನಾಯಿಗೆ ತಮ್ಮ ಬಾಸ್ ನ ಹೆಸರಿಟ್ಟು ಆಫೀಸಿನಲ್ಲಿನ ತಮ್ಮ ನಾಯಿಪಾಡನ್ನು ಮರೆಯುವ ಕಲ್ಪನೆಯೇ ಕಚಗುಳಿ ಕೊಡುವಂಥದ್ದು. ಇಂಥ ಅನೇಕ ಪ್ರಯೋಗಗಳು ಸಂಕಲನದುದ್ದಕ್ಕೂ ಕಾಣಬಹುದು. ’ಹಾಸ್ಯಬರವಣಿಗೆ ನೇಯ್ಗೆ ಇದ್ದಂತೆ. ತೀರಾ ಹತ್ತಿರಕ್ಕೆ ಹೆಣೆದರೆ ಗಂಟು, ಕಗ್ಗಂಟು ಆಗಿ ಸುಲಭತೆ, ಸುಪ್ರಿಯತೆಗಳನ್ನು ಕಳೆದುಕೊಳ್ಳುತ್ತದೆ; ಕೊಂಚ ಸಡಿಲ ಬಿಟ್ಟರೆ ಜಾಳುಜಾಳಾಗುತ್ತದೆ. ಯಾವ ಹಾಸ್ಯಬರಹವನ್ನು ಎಲ್ಲಿಯವರೆಗೆ ಎಳೆದು ಎಲ್ಲಿ ನಿಲ್ಲಿಸಬೇಕೆಂಬ ಅರಿವಿದ್ದರೆ ಮಾತ್ರ ಯಶಸ್ವಿ ಹಾಸ್ಯಲೇಖನ ಸಾಧ್ಯ. ಕುರ್ತಕೋಟಿಯದು ಈ ವಿಷಯದಲ್ಲಿ ಕುರ್ತೇಟು. ಈಗಿನ ಯಾವುದೇ ಕಾಮೆಡಿ (ಆಂಗ್ಲದಲ್ಲಿ ಅದನ್ನು ಕಾಮೆಡಿ ಎಂದೂ, ಹಾಸ್ಯಗಾರನನ್ನು ಕಮೆಡಿಯನ್ ಎಂದೂ ಕರೆದರೂ, ಅದೇಕೋ ಕನ್ನಡದಲ್ಲಿ ಕಾಮೆಡಿ ಮಿಡಿ ತೊಟ್ಟು ನಿಂತು ಕಾಮಿಡಿ ಆಗಿದೆ) ಪ್ರಸ್ತುತ ಕನ್ನಡ ಹಾಸ್ಯ ಅಶ್ಲೀಲತೆಯತ್ತ ವಾಲಿರುವ ಭಯದಲ್ಲಿರುವಾಗ ಅದರ ಸುಳಿವೂ ಇರದಂತಹ ಶುದ್ಧ ಹಾಸ್ಯವನ್ನು ಕಟ್ಟಿಕೊಟ್ಟಿರುವ ಗುರುಪ್ರಸಾದ ಕುರ್ತಕೋಟಿ ಅವರ ಶ್ರಮ ನನಗೆ ಮೆಚ್ಚುಗೆಯಾಯಿತು’ ಎಂದು ಪ್ರಶಂಸಿಸಿದ್ದಾರೆ. 

 

 

About the Author

ಗುರುಪ್ರಸಾದ ಕುರ್ತಕೋಟಿ

ಲೇಖಕ ಗುರುಪ್ರಸಾದ ಕುರ್ತಕೋಟಿ ಅವರು ಹುಟ್ಟಿದ್ದು ಗದಗಿನಲ್ಲಿ. ಬೆಳೆದಿದ್ದು ಲಕ್ಷ್ಮೇಶ್ವರ. ಮುಂದೆ ಎಂಜಿನಿಯರಿಂಗ್ ಅಭ್ಯಸಿಸಿ, software ಉದ್ಯಮದಲ್ಲಿ ತೊಡಗಿಸಿಕೊಂಡು ಸುಮಾರು ಎರಡು ದಶಕಗಳ ಕಾಲ ಹಲವು ದೊಡ್ಡ ಕಂಪನಿಗಳಲ್ಲಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅಮೆರಿಕೆಯಲ್ಲಿಯೂ ಕೆಲವು ವರ್ಷ ಕೆಲಸ ಮಾಡಿ, ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.  ಮೊದಲಿನಿಂದಲೂ ಓದು ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಅವರ  ಹಲವಾರು ನಗೆ ಬರಹಗಳು, ಲಲಿತ ಪ್ರಬಂಧಗಳು ಹಾಗೂ ಕತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟ ಆಗಿವೆ. ಅವರು ಸಂಪಾದಿಸಿದ್ದ "ಎಲ್ಲರಂಥವನಲ್ಲ ನನ್ನಪ್ಪ" ಹಾಗೂ "ಅಪ್ಪರೂಪ" ಪುಸ್ತಕಗಳು ಓದುಗರಿಂದ ಪ್ರಶಂಸೆಗೆ ಪಾತ್ರವಾಗಿವೆ. "ಕೇಶಕ್ಷಾಮ" ಅವರ ಮೂರನೆಯ ಕೃತಿ. ಕೃಷಿಯ ...

READ MORE

Related Books