ಸಂಗೀತ ಕಲಾವಿದ ಟಿ ಎಂ ಕೃಷ್ಣ ಅವರ ಆಯ್ದ ಬರಹಗಳ ಅನುವಾದಗಳಿರುವ ಕೃತಿ. ಲೇಖಕ ಮಾಧವ ಐತಾಳ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ವಿವಿಧ ಲೇಖಕರು ಇಲ್ಲಿನ ಬರಹಗಳನ್ನು ಅನುವಾದಿಸಿದ್ದಾರೆ. ಬೆನ್ನುಡಿಯಲ್ಲಿರುವಂತೆ, ನಮ್ಮ ಕಾಲಮಾನದ ಅಪೂರ್ವ ಕಲಾವಿದನ ಈ ಪ್ರಭಾವಶಾಲಿ ಬರಹಗಳು ಭಿನ್ನಮತಗಳನ್ನು ಹೀಗಳೆಯುವವರಿಗೆ ಕೊಟ್ಟ ಪ್ರತಿಪ್ರಹಾರ. ಇಲ್ಲಿನ ಲೇಖನಗಳು ಮೂರು ಅತಿ ದೊಡ್ಡ ರಾಜಕೀಯ ಕೆಡುಕುಗಳಾದ ನಿರಂಕುಶಶಾಹಿ, ಕೋಮುವಾದ ಹಾಗೂ ಅಸಮಾನತೆಗೆ ಮುಖಾಮುಖಿಯಾಗಿವೆ. ಈ ಪ್ರತಿಯೊಂದು ಕೆಡುಕಿಗೂ ದೀರ್ಘವಾದ ಚಾರಿತ್ರಿಕ ಹಿನ್ನೆಲೆ ಇದೆ. ಜಾತಿ ಎನ್ನುವುದು ಚಾರಿತ್ರಿಕ ವಂಚನೆ, ನೈತಿಕವಾಗಿ ಊನಗೊಂಡಂಥದ್ದು ಹಾಗೂ ಎಲ್ಲ ಅಸಮಾನತೆಗಳ ಮೂಲ. ಈ ಕೆಡುಕುಗಳು ದೇಶ ಮಾತ್ರವಲ್ಲ, ಮನುಷ್ಯರ ಘನತೆಯನ್ನೇ ಒರೆಸಿಹಾಕುತ್ತಿವೆ. ಟಿಎಂಕೆ ಹೇಳುವ ಆದರ್ಶ ಆಡಳಿತ ಬೇರೆಲ್ಲೂ ಇಲ್ಲ - ದೇಶವನ್ನು ಸೃಷ್ಟಿಸಿದ ದಾಖಲೆಯಾದ ಸಂವಿಧಾನದಲ್ಲಿ ಇದೆ.
©2024 Book Brahma Private Limited.