ಭಾರತವು ಬ್ರಿಟಿಷರಿಂದ ಸ್ವಾತಂತ್ಯ್ರ ಪಡೆದ ನಂತರ ಅಂದಿನ ಗೃಹಸಚಿವ ವಲ್ಲಭಭಾಯಿ ಪಟೇಲರಿಗೆ ಕಾಡಿದ ಬಹುದೊಡ್ಡ ಸಮಸ್ಯೆ ಎಂದರೆ , ಭಾರತದಲ್ಲಿಯ ನೂರಾರು ಸಂಖ್ಯೆಯಲ್ಲಿಯ ಸಣ್ಣಸಣ್ಣ ಸಂಸ್ಥಾನಗಳನ್ನು ಸ್ವತಂತ್ಯ್ರ ಭಾರತದಲ್ಲಿ ವಿಲೀನಗೊಳಿಸುವುದು. ಈ ಕುರಿತಂತೆ ಲೇಖಕ ಸೊಂದಲಗೆರೆ ಲಕ್ಷ್ಮೀಪತಿ ಅವರ ಕೃತಿ-ಭಾರತೀಯ ಸಂಸ್ಥಾನಗಳ ಏಕೀಕರಣ. ಲೇಖಕ ವಿ.ಪಿ.ಮೆನನ್ ಅವರ ಮೂಲ ಕೃತಿಯನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳಲು ಎಲ್ಲ ಸಂಸ್ಥಾನಗಳಿಗೆ ಮೊದಲು ಸೂಚನೆ ಕೊಡಲಾಯಿತು. ಬಹುತೇಕರ ಸಂಸ್ಥಾನಗಳ ಸಾಮಂತರು ಒಪ್ಪಿದರು. ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅವರ ಮೇಲೆ ಸೈನ್ಯದ ದಾಳಿ ನಡೆಸಿ ವಿಲೀನಗೊಳಿಸಿ ಕೊಳ್ಳಲಾಯಿತು. ಆದರೆ, ಹೈದ್ರಾಬಾದ್ ನಿಜಾಮನು ಮಾತ್ರ ತನ್ನ ಸಂಸ್ಥಾನ ವಿಲೀನಗೊಳಿಸಲು ನಿರಾಕರಿಸಿ, ಸುಮಾರು ಒಂದು ವರ್ಷದವರೆಗೂ ತಾನೇ ಆಳುತ್ತಿದ್ದ. ಏನೆಲ್ಲ ಸೂಚನೆಗಳನ್ನು ಧಿಕ್ಕರಿಸಿದ್ದ ಪರಿಣಾಮ, ಗೃಹಸಚಿವ ವಲ್ಲಭಬಾಯಿ ಪಟೇಲರು ನಿಜಾಮನ ಆಡಳಿತ ಪ್ರದೇಶದ ಮೇಲೆ ಸೈನ್ಯವನ್ನು ದಾಳಿ ಮಾಡಿಸಿ ವಶಪಡಿಸಿಕೊಂಡರು. ಇಂತಹ ಐತಿಹಾಸಿಕ ಘಟನೆಗಳನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.