‘ಭಾರತದಲ್ಲೊಂದು ಸುಂಕದ ಬೇಲಿ’ ಎಸ್. ಎಸ್. ನರೇಂದ್ರಕುಮಾರ್ ಅವರ ಕೃತಿ. ಬ್ರಿಟಿಷ್ ವಸಾಹತುಶಾಹಿಗಳು ಸುಮಾರು ಮೂರೂವರೆ ಶತಮಾನಗಳ ಕಾಲ ಭಾರತವನ್ನು ಕೊಳ್ಳೆಹೊಡೆದರು. ಹೀಗೆ ಕೊಳ್ಳೆ ಹೊಡೆವ ಸಲುವಾಗಿಯೇ ಹಲವಾರು ಕಾನೂನುಗಳನ್ನು ರೂಪಿಸಿದರು. ದಿನಬಳಕೆಯ ಅಗತ್ಯವಸ್ತುಗಳ ಮೇಲೂ ಸುಂಕ ಹೇರಿದರು. ಉಪ್ಪಿನ ಸಾಗಾಟವನ್ನೂ ನಿರ್ಬಂಧಿಸಿದರು. ಅಲ್ಲದೇ, ಉಪ್ಪಿನ ಸಾಗಾಟದ ಮೇಲೆ ಹದ್ದಿನ ಕಣ್ಣಿಡಲು ನಿರ್ದಾಕ್ಷಿಣ್ಯವಾಗಿ ಕಂದಾಯ ವಸೂಲಿ ಮಾಡಲು ದಕ್ಷಿಣ ಮತ್ತು ಪಶ್ಚಿಮ ಭಾರತದಿಂದ ಪೂರ್ವೋತ್ತರ ಭಾರತಕ್ಕೆ ಉಪ್ಪಿನ ಮುಕ್ತ ಸಾಗಾಟ ನಡೆಯುವುದನ್ನು ತಪ್ಪಿಸಲು ಮುಳ್ಳುಕಂಟಿಗಳಿಂದ ದಟ್ಟ ಪೊದೆಗಳಿಂದ ಕೂಡಿದ 2500 ಮೈಲು ಉದ್ದದ ಸುಂಕದ ಬೇಲಿಯನ್ನು ನಿರ್ಮಿಸಿದರು. ಈ ಬೇಲಿಯ ಇಕ್ಕೆಲಗಳಲ್ಲಿ ಕಾವಲಿಗೆಂದು ಸುಮಾರು 12 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಇಂಥದ್ದೊಂದು ಬೃಹತ್ತಾದ ಬೇಲಿಯ ಜಾಡುಹಿಡಿದು ಹೊರಟ ಬ್ರಿಟಿಷ್ ಪ್ರಜೆ ರಾಯ್ ಮ್ಯಾಕ್ಸ್ ಹ್ಯಾಮ್ ದಾಖಲಿಸಿದ ಅಪೂರ್ವ ಅನುಭವಗಳ ಸಂಗ್ರಹ ರೂಪವೇ ‘ಭಾರತದಲ್ಲೊಂದು ಸುಂಕದ ಬೇಲಿ’ ಕೃತಿ. ದಾಖಲೆಯ ಈ ಕೃತಿಯನ್ನು ಎಸ್.ಎಸ್. ನರೇಂದ್ರಕುಮಾರ್ ಅವರು ಅಷ್ಟೇ ಸೂಕ್ಷ್ಮವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.