‘ಬೆಳದಿಂಗಳ ಬಾಲೆ’ ಬಿ.ಎಲ್ ಲಕ್ಷ್ಮಣ ರಾವ್ ಅವರ ನಗೆಗವಿತೆಗಳಾಗಿವೆ. ಲಕ್ಷ್ಮಣರಾಯರ ಕಾವ್ಯದ ಭಾಷೆಯಿದೆಯಲ್ಲ, ಅದಕ್ಕೆ ಅದರದ್ದೇ ಒಂದು ಲಯವಿದೆ, ಲಾಲಿತ್ಯವಿದೆ, ವೈಯಾರವಿದೆ, ಕಿಲಾಡಿತನ ಇದೆ. ಇದು ಅವರ ಭಾಷೆಗೆ ಅನಾಮತ್ ಬಂದ ಗುಣವಲ್ಲ - ಅಂಥದೊಂದು ಕಿಲಾಡಿತನ, ತುಂಟತನ, ರಸಿಕತೆ ( ಸಂಕೋಚವೇಕೆ? ಪೋಲಿತನ! ) ಅವರ ಬದುಕಿನ ಗ್ರಹಿಕೆಯಲ್ಲೇ ಇದೆ. ಹಾಗಾಗಿ ನವ್ಯದ ಕಟು ವಿಮರ್ಶಕರೂ ಕೂಡ ಲಕ್ಷ್ಮಣರಾಯರ ಕಾವ್ಯವನ್ನೋದಿ ಆನಂದಿಸುವ ಸೌಭಾಗ್ಯದಿಂದ ವಂಚಿತರಾಗಲಿಲ್ಲ. ಈಗ ಬಿಡಿ, ಅವರ ಪದ್ಯದ ಸಾಲುಗಳ ಮೇಲೆ ಒಮ್ಮೆ ಕಣ್ಣಾಡಿಸಿದರೂ ಸಾಕು, ಈ ಸಾಲುಗಳು ಲಕ್ಷ್ಮಣರಾಯ ರವೇ ಅಂತ ಫಳಕ್ಕನೆ ಗುರುತಾಗಿಬಿಡುತ್ತವೆ... ಓದುತ್ತಿದ್ದಂತೇ ನಿಮ್ಮ ಬಾಯಲ್ಲಿ, ಕಣ್ಣಲ್ಲಿ ನೀರು ಚಿಲ್ಲೊಡೆಯಬೇಕು ಅಂಥಾ ಹುಳಿಯೊಗರು, ಉಪ್ಪುಖಾರ, ಸಿಹಿಕಹಿ ಎಲ್ಲವೂ ಬೆರೆತ ಸವೆಯದ ಪೆಪ್ಪರುಮೆಂಟುಗಳು ಇವು.
©2024 Book Brahma Private Limited.