ಬಾಬ್ಬಿ

Author : ಎಂ.ಎಸ್. ನರಸಿಂಹಮೂರ್ತಿ

Pages 128

₹ 5.00




Year of Publication: 1976

Synopsys

ಲೇಖಕ ಎಂ.ಎಸ್. ನರಸಿಂಹಮೂರ್ತಿ ಅವರ ಕೃತಿ ‘ಬಾಬ್ಬಿ’.ಪುಸ್ತಕದ ಮುನ್ನುಡಿಗಾಗಿ ಅವರಿವರನ್ನು ಹುಡುಕದೆ ತಾವೇ ನಾಲ್ಕು ಸಾಲುಗಳನ್ನು ಬರೆದು ಮುಗಿಸಿದ್ದಾರೆ.. ಅವರ ಅಭಿಮಾನಿಯೊಬ್ಬ ಕೃತಿ ಕುರಿತು ಆಡಿದ ಮಾತುಗಳನ್ನೇ ಮುನ್ನುಡಿ ಆಗಿಸಿದ್ದಾರೆ. 1973ರಲ್ಲಿ ಬಿಡುಗಡೆ ಆದ "ಬಾಬ್ಬಿ" ಚಿತ್ರ ನೋಡಿ ಆ ಹೆಸರನ್ನು ಕೃತಿಗೆ ಇಟ್ಟಿದ್ದರೂ ಅದರ ಯಾವ ಅಂಶವೂ ಇದರಲ್ಲಿ ಕಂಡುಬರುವುದಿಲ್ಲ. ಇವರ ಕೃತಿ ಬಹಳ ಚೆನ್ನಾಗಿದೆ ಎಂದವರೊಬ್ಬರು "ಬಾಬ್ಬಿ" ಚಿತ್ರ ವಿಮರ್ಶೆ ಮಾಡಿದುದನ್ನೇ ಮುನ್ನುಡಿಯಾಗಿಸಿದ್ದಾರೆ. ಮುಖಪುಟದಲ್ಲಿ ಕಾಣಿಸಿದಂತೆ ಈ ಕೃತಿಯಲ್ಲಿ ಒಟ್ಟು 17 ಹಾಸ್ಯ ಪ್ರಸಂಗಗಳಿವೆ

About the Author

ಎಂ.ಎಸ್. ನರಸಿಂಹಮೂರ್ತಿ
(20 October 1949)

ಹಾಸ್ಯ ಬರಹಗಾರ, ಬಾಷಣಕಾರ ಎಂ.ಎಸ್.ನರಸಿಂಹಮೂರ್ತಿ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 1949 ಅಕ್ಟೋಬರ್ 20 ರಂದು ಜನಿಸಿದರು. ಕಾದಂಬರಿ, ಮಕ್ಕಳಸಾಹಿತ್ಯ, ವಿಚಾರ ಸಾಹಿತ್ಯ, ಹಾಸ್ಯ ಸಂಕಲನ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿರುವ ಇವರು ಇದುವರೆಗೆ 50 ಪುಸ್ತಕಗಳನ್ನು ಬರೆದಿದ್ದಾರೆ. 5000 ಕ್ಕೂ ಹೆಚ್ಚು ನಗೆ ಎಪಿಸೋಡ್‌ಗಳನ್ನು ರಚಿಸಿದ ರಾಷ್ಟ್ರೀಯ ದಾಖಲೆ ಅವರದು. 2000ಕ್ಕೂ ಹೆಚ್ಚು ಪ್ರಕಟಿತ ನಗೆ ಲೇಖನಗಳು, 100ಕ್ಕೂ ಹೆಚ್ಚು ಬಾನುಲಿ ನಾಟಕಗಳ ರಚನೆ.  ಸ್ವಯಂ ವಧು, ಶ್ರಮದಾನ, ಬಾಬ್ಬಿ, ಗೂಳಿಕಾಳಗ, ಕಂಡಕ್ಟರ್ ಕರಿಯಲಪ್ಪ, ವೈಕುಂಠಕ್ಕೆ ಬುಲಾವ್, ಕಿವುಡು ಸಾರ್ ಕಿವುಡು ಮತ್ತು ಇತರೆ ...

READ MORE

Related Books