ಅಂತ್ಯವಿಲ್ಲದ ಹಾದಿ

Author : ಎಂ. ಜಿ. ಹೆಗಡೆ

Pages 182

₹ 100.00




Year of Publication: 2019
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 08023183311

Synopsys

‘ಅಂತ್ಯವಿಲ್ಲದ ಹಾದಿ’ ಅನುವಾದಿತ ವೈಚಾರಿಕ ಲೇಖನಗಳ ಸಂಕಲನ- 2019, ಸಂಪಾದಕರು ಡಾ. ಎಂ.ಜಿ ಹೆಗಡೆ ಹಾಗೂ ವಿವಿಧ ಅನುವಾದಕರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಪ್ರತಿ ವರ್ಷ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನುವಾದಿತ ಬರೆಹಗಳನ್ನು ಸಂಕಲನವಾಗಿ ಪ್ರಕಟಿಸುವ ಯೋಜನೆ ರೂಪಿಸಿದೆ ಅದರಂತೆ 2014, 2015ರಲ್ಲಿ ಪ್ರಕಟಗೊಂಡ ಅನುವಾದಿತ ಪತ್ರಿಕಾ ಬರೆಹಗಳನ್ನು ಸಂಕಲನವಾಗಿ ಪ್ರಕಟಿಸಲಾಗಿದೆ. 2017ರಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕವಿತೆಗಳ ಸಂಕಲನವೂ ಪ್ರಕಟವಾಗಿದೆ. 2018ರಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅನುವಾದಿತ ವೈಚಾರಿಕ ಲೇಖನಗಳನ್ನು ಸಂಕಲಿಸಿ, ಪ್ರಕಟಣೆಗೆ ಸಿದ್ಧಪಡಿಸಿಕೊಡುವ ಜವಾಬ್ದಾರಿಯನ್ನು ಪ್ರಾಧಿಕಾರದ ಸದಸ್ಯ ಡಾ.ಎಂ.ಜಿ.ಹೆಗಡೆ ಅವರಿಗೆ ವಹಿಸಲಾಗಿತ್ತು. ಅವರು ಲೇಖನಗಳನ್ನು ಸಂಗ್ರಹಿಸಿ,ಆಯ್ಕೆ ಮಾಡಿ ಸಂಪಾದಿಸಿ ಸೂಕ್ತ ಪ್ರಸ್ತಾವನೆಯೊಂದಿಗೆ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ಹಲವು ವೈಚಾರಿಕ ಲೇಖನಗಳು ಸಂಕಲನಗೊಂಡಿವೆ.

About the Author

ಎಂ. ಜಿ. ಹೆಗಡೆ

ಡಾ. ಎಂ.ಜಿ ಹೆಗಡೆ ಕುಮಟಾದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಬರಹಗಳು ಇವರ ಆಸಕ್ತಿ ಕ್ಷೇತ್ರವಾಗಿದೆ.  ಅಧ್ಯಾಪನ, ಅಧ್ಯಯನ ಜೊತೆಗೆ ಸಂಶೋಧನೆ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರಾದ ಡಾ.ಎಂ.ಜಿ.ಹೆಗಡೆಯವರು ಜಿ.ಎಸ್‌. ಆಮೂರ ಅವರ ಅಭಿನಂದನ ಗ್ರಂಥ ’ವಿಮರ್ಶಾ ವಿವೇಕ’ದ ಸಂಪಾದಕರು. ಹಿರಿಯ ಸಾಹಿತಿ ಬಿ.ಎಚ್. ಶ್ರೀಧರ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ಸಾಲು ದೀಪಗಳು, ತಲಸ್ಪರ್ಶಿ, ಎಂ. ಹಿರಿಯಣ್ಣ, ಅಂತ್ಯವಿಲ್ಲದ ಹಾದಿ, ಡಿ.ಡಿ ಕೊಸಾಂಬಿ ಅವರ ಆಯ್ದ ಬರಹಗಳು, ಮಹಾಭಾರತ, ಅಮೃತ ಬಿಂದು, ಸಹಯಾನ, ಬೆಳಕಿನ ...

READ MORE

Related Books