ಮಕ್ಕಳಿಗಾಗಿ ವಿಜ್ಞಾನ ಬರಹಗಳನ್ನು ಬರೆಯುವ ಮೂಲಕ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವಲ್ಲಿ ಹತ್ಯು ಹಲವು ಕೃತಿಗಳನ್ನು ರಚಿಸಿದ ಲೇಖಕಿ ಗಾಯತ್ರಿ ಮೂರ್ತಿ ಅವರ ಮತ್ತೊಂದು ಕೃತಿ-ನಿಮಗಿದು ಗೊತ್ತೆ? ಯಾವಾಗ ಎಂದು ಹೇಳಿ. ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಕೆರಳಿಸುವ ಕೃತಿ ಇದು. ಕೇವಲ ಮಕ್ಕಳು ಮಾತ್ರವಲ್ಲ; ದೊಡ್ಡವರಿಗೂ ಈ ಮನೋಭಾವದ ಅಗತ್ಯವನ್ನು ಹಾಗೂ ಸುತ್ತಮುತ್ತಲಿನ ಸಣ್ಣ ಸಣ್ಣ ವಿಷಯಗಳನ್ನು ವೈಜ್ಞಾನಿಕವಾಗಿ ತಿಳಿಯುವಲ್ಲಿ ಈ ಕೃತಿಯು ಅತ್ಯಂತ ಉಪಯುಕ್ತವಾಗಿದೆ. ಮಕ್ಕಳ ಕುತೂಹಲಕಾರಿ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡುವ ಇಲ್ಲಿಯ ಬರಹಗಳ ವಿವರಣೆಯು ಅತ್ಯಂತ ಸರಳವೂ, ಸುಲಭವೂ ಇದೆ. ಡೈನೋಸರ್ ಗಳೆಂದರೇನು? ಬಲ್ಬು ಹೇಗೆ ಉರಿಯುತ್ತದೆ. ದ್ರಾಕ್ಷಿಗಳು ಹುಳಿ ಏಕೆ? ಕಬ್ಬು ಸಿಹಿ ಏಕೆ? ಇಂತಹ ಸಾಮಾನ್ಯ ಹಾಗೂ ಸಣ್ಣ ಪ್ರಶ್ನೆಗಳು ನಮಗೆ ನೀಡುವ ಅಗಾಧ ಜ್ಞಾನ ಭಂಡಾರವಾಗಿ ಈ ಕೃತಿ ಇದೆ.
©2025 Book Brahma Private Limited.