ರಸಾಯನ ವಿಭಾಗದಲ್ಲಿ ವಿಜ್ಞಾನ ಬೆಳೆಯಲು ನಮ್ಮ ಭಾರತೀಯ ವಿಜ್ಞಾನಿಗಳು ನೀಡಿದ ಕೊಡುಗೆಯೂ ಕಡಿಮೆಯೇನಲ್ಲ. ಅವರ ಕಾಣಿಕೆಯನ್ನು ಸ್ಥೂಲವಾಗಿ ಅರಿತುಕೊಳ್ಳುವ ಪುಸ್ತಕ ಇದಾಗಿದೆ. ಪ್ರಾಚೀನ ಭಾರತದ ರಸಾಯನ ವಿಜ್ಞಾನದಲ್ಲಿ ಗಂಧಕ, ಪಾದರಸ ಮೊದಲಾದವನ್ನು- ಕೆಲವೊಮ್ಮೆ ಸಸ್ಯಸಂಯೋಗದಿಂದ – ಸಂಕೀರ್ಣ ಪ್ರಕ್ರಿಯೆಗೊಳಪಡಿಸಿ ವೈದ್ಯಶಾಸ್ತ್ರದಲ್ಲಿ ಬಳಸಿಕೊಳ್ಳಲಾಗಿದೆ. ಭಾರತದ ಲೋಹಕುಶಲಕರ್ಮಿಗಳು ಕಬ್ಬಿಣ ಮಾತ್ರವಲ್ಲದೆ ಉಕ್ಕು ಮೊದಲಾದ ಮಿಶ್ರಲೋಹಗಳ ತಯಾರಿಕೆಯಲ್ಲಿ ಅತಿಶಯ ಪರಿಣತಿ ಸಾಧಿಸಿದ್ದರು. ತಾಮ್ರ ಮತ್ತು ತವರದ ಮಿಶ್ರಣವಾದ ಕಂಚಿನ ತಯಾರಿಕೆ 1200 ವರ್ಷಗಳ ಹಿಂದೆಯೆ ಭಾರತೀಯರಿಗೆ ಕರಗತವಾಗಿತ್ತು. ತಾಮ್ರ ಮತ್ತು ಸತುವಿನ ಮಿಶ್ರಣವಾದ ಹಿತ್ತಾಳೆ ವಿಶ್ವದಲ್ಲಿಯೆ ಮೊದಲು ತಯಾರಾದದ್ದು ಭಾರತದಲ್ಲಿ. ರಸಾಯನ ವಿಜ್ಞಾನದ ವಿವಿಧ ಶಾಖೆಗಳಲ್ಲಿ ಪ್ರಾಚೀನ ಕಾಲದ ಹಾಗೂ ಮಧ್ಯಯುಗದ ಭಾರತದ ಸಾಧನೆಯ ಸಂಕ್ಷಿಪ್ತ ಅವಲೋಕನ ಈ ಕೃತಿಯಾಗಿದೆ.
©2024 Book Brahma Private Limited.