19ನೇ ಶತಮಾನದ ಉದ್ದಾಮ ವಿಜ್ಞಾನಿಗಳು ಕಂಡುಹಿಡಿದ ತಥ್ಯಗಳು ನ್ಯೂಟನ್ ನಿರ್ಮಿಸಿದ 'ವಿಶ್ವ'ವನ್ನು ಕದಲಿಸಿ ಭೌತಶಾಸ್ತ್ರಪ್ರಪಂಚವನ್ನು ಗೊಂದಲದಲ್ಲಿ ಕೆಡಹಿದ್ದಾಗ ಐನ್‌ಸ್ಟೈನರು ಹೊಸದೊಂದು ಕಾಣ್ಕೆಯ ಸೂತ್ರಕ್ಕೆ ವಿಶ್ವವನ್ನು ಒಳಪಡಿಸಿ 'ಅನರ್ಥಗಳಿಗೆ 'ಅರ್ಥ'ದಾನ ಮಾಡಿದರು. ಅವರ ವಿಶೇಷ ಸಾಪೇಕ್ಷತಾ ಸಿದ್ದಾಂತ ಮತ್ತು ಅನಂತರ ರೂಪಿಸಿದ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ಎಷ್ಟುಮಟ್ಟಿಗೆ ವಿಜ್ಞಾನವೆಂದು ಹೇಳಬಹುದೋ ಅಷ್ಟೇ ಮಟ್ಟಿಗೆ 'ದರ್ಶನ'ವೆಂದೂ ಕರೆಯಬಹುದು. ಪದಾರ್ಥ ಮತ್ತು ಶಕ್ತಿಯನ್ನು, ಕಾಲ ಮತ್ತು ದೇಶ ವನ್ನು ಒಂದೇ ಮಹಾ'ಋತ'ದ ಅಂಕೆಯಲ್ಲಿ ನೆಲೆಗೊಳಿಸಿದ ಅವರ ಕಾರ್ಯ ಕ್ವಾಂಟಮ್ ಭೌತಶಾಸ್ತ್ರದಿಂದ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರವೊದಗಿಸಿದ ಬಗೆಯನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತ್ರತವಾಗಿ ವಿವರಿಸಿದ್ದಾರೆ.
©2025 Book Brahma Private Limited.