ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮನುಷ್ಯ ಎಷ್ಟೇ ಆಧುನಿಕನಾದರೂ ಆಕಾಶಕಾಯಗಳ ಬಗೆಗಿನ ಅಜ್ಞಾನಕ್ಕೆ ಕೊರತೆ ಇಲ್ಲ.
ವೈಚಾರಿಕ ಮನೋಭಾವದ ಕೊರತೆ, ಹಣ ಸುರಿದು ಏನನ್ನು ಬೇಕಾದರೂ ಖರೀದಿಸಬಹುದು ಎಂಬ ದಾರ್ಷ್ಟ್ಯ ಮನುಷ್ಯನನ್ನು ಕಂದಾಚಾರಿಯನ್ನಾಗಿಸುತ್ತಲೇ ಇದೆ. ಭವಿಷ್ಯ ವಾಚನ, ಕರ್ಮಫಲ, ಆಧ್ಯಾತ್ಮಿಕತೆ, ದೈವಿಕ ಅನುಭವ ಮುಂತಾದ ಸುಳಿಯಲ್ಲಿ ತಾನೂ ಸಿಲುಕುತ್ತ ಇತರರನ್ನೂ ಸಿಲುಕಿಸುತ್ತಲೇ ಇದ್ದಾನೆ ಆತ. ಇಂತಹ ಮೌಢ್ಯಗಳನ್ನು ಪ್ರಶ್ನಿಸುವ ಯತ್ನ ’ಜಾತಕ ಮತ್ತು ವಿಜ್ಞಾನ’.
ಕತ್ತಲನ್ನು ತೊರೆದು ಬೆಳಕನ್ನು ಆಯ್ದುಕೊಳ್ಳಲು ಬಯಸುವ ಎಲ್ಲರೂ ಓದಬೇಕಾದ ಕೃತಿ ಎಂದರೂ ಅತಿಶಯೋಕ್ತಿ ಅಲ್ಲ.
©2025 Book Brahma Private Limited.