ಭಾರತದಲ್ಲಿ ಬೆಳೆದು ಬಂದ ಪಾರಂಪರಿಕ ಖಗೋಲಶಾಸ್ತ್ರ, ಗಣಿತ, ವೈದ್ಯಕೀಯ, ರಾಸಾಯನಿಕ ಪ್ರಕ್ರಿಯೆಗಳು, ಅವುಗಳು ಶಾಖೋಪಶಾಖೆಗಳಾಗಿ ಬೆಳೆದ ಬಗೆಯನ್ನು ವಿವರಿಸಲಾಗಿದೆ. ಸಿದ್ಧಿಗಳನ್ನಷ್ಟೇ ಅಲ್ಲದೆ ಭೌತ ಪ್ರಪಂಚ ಮತ್ತು ಸಸ್ಯ ಜಗತ್ತುಗಳಿಗೆ ಸಂಬಂಧಿಸಿದ ಪರಿಕಲ್ಪನೆಗಳನ್ನು ಕುರಿತು ಮಾಹಿತಿಯನ್ನು ನೀಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೆ, ಆಧುನಿಕ ವಿಜ್ಞಾನ ಭಾರತದಲ್ಲಿ ಪ್ರವೇಶ ಪಡೆದ ಬಗೆಯ ಕುರಿತು ವಿವರಗಳನ್ನು ಒದಗಿಸಿದ್ದಾರೆ. ನಂತರ ಅದರ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಭಾರತೀಯ ವಿಜ್ಞಾನಿಗಳ ಮಹತ್ವಪೂರ್ಣ ಮೌಲಿಕ ಕೊಡುಗೆಗಳನ್ನು, 5000 ವರ್ಷಗಳ ವ್ಯಾಪ್ತಿಯನ್ನು ಕ್ರಮಿಸಿ ಬಂದ ಭಾರತದಲ್ಲಿನ ವಿಜ್ಞಾನದ ವಸ್ತುನಿಷ್ಠ, ಐತಿಹಾಸಿಕ ಚಿತ್ರಣವನ್ನು ಚಿತ್ರಿಸಲಾಗಿದೆ. ವಿಜ್ಷಾನದ ಆಸಕ್ತರಿಗೆ ಉತ್ತಮವಾದ ಕೈಪಿಡಿಯಾಗಿದೆ.
©2024 Book Brahma Private Limited.