`ಕರ್ತಾರನಿಗೊಂದು ಕಿವಿಮಾತು’ ಹದಿನಾಲ್ಕು ವಿಜ್ಞಾನ ಲೇಖನಗಳ ಸಂಚಯ. ಇದರಲ್ಲಿ ವೈವಿಧ್ಯಮಯ ಲೇಖನಗಳಿವೆ. ಕರ್ತಾರನಿಗೊಂದು ಕಿವಿಮಾತು ಲೇಖನದಲ್ಲಿ ಮನುಷ್ಯನ ಅಂಗಾಂಗಗಳನ್ನು ಇನ್ನಷ್ಟು ನೇರ್ಪುಗೊಳಿಸಿದ್ದರೆ, ಅವನ ನಿತ್ಯ ಬದುಕಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ವಿಶೇಷ ತರ್ಕವಿದೆ. ಜೈವಿಕ ಯುದ್ಧ, ನಿಸರ್ಗದಲ್ಲಿ ನೀರಿನ ಸಮಸ್ಯೆ, ಪ್ರಾಣ ಪ್ರಯೋಗಾಲಯದಲ್ಲಿ ಅವುಗಳಿಗಾಗುವ ಹಿಂಸೆ, ಆಕಾಶದಿಂದ ಎರಗಿಬರುವ ಉಲ್ಕೆಗಳು ತರುವ ಆತಂಕ, ಮಂಗಳನಲ್ಲಿರುವ ಸದ್ಯದ ಸ್ಥಿತಿ, ಬೆಂಗಳೂರಿನ ಎಡೆಯೂರಿನಲ್ಲಿ ಪಚ್ಚೆ ಗಣಿ ಇದ್ದ ವಿಸ್ಮಯಕಾರಿ ವಿಚಾರ, ನ್ಯೂಟನ್ ಮತ್ತು ಷೇಕ್ಸ್ ಪಿಯರ್‍ಗೆ ಏಕೆ ಅಷ್ಟು ಮಹತ್ವ ಎನ್ನುವ ವಿಚಾರ, ಚರ್ಮ ಸೃಷ್ಟಿಸುವ ಕಪ್ಪು-ಬಿಳುಪಿನ ವಿವಾದ, ಲಾಲ್‍ಬಾಗ್ ಕಲ್ಲು ಕೇಳುವ ಕಥೆ, ಹಾಗೆಯೇ ಮನುಷ್ಯ ವಿಪರೀತವಾಗಿ ಬಯಸುವ ಚಿನ್ನ ಕುರಿತು ಅಮೂಲ್ಯ ಮಾಹಿತಿಗಳು ಈ ಸಂಗ್ರಹದಲ್ಲಿ ಸೇರಿವೆ. ಈ ಒಂದೊಂದೂ ಕ್ಷೇತ್ರಗಳ ನಿರೂಪಣೆ ಓದುಗರಿಗಿದೆ. ಆಪ್ತವಾಗುವ ಶೈಲಿಯಲ್ಲಿದೆ. ಈ ಕೃತಿಗೆ 2003ರ ಅತ್ಯುತ್ತಮ ವಿಜ್ಞಾನ ಕೃತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ನೀಡಿ ಗೌರವಿಸಿದೆ.
©2025 Book Brahma Private Limited.