ಲೇಖಕ ಅಡ್ಯನಡ್ಕ ಕೃಷ್ಣಭಟ್ ಅವರ ಕೃತಿ- ‘ಫಿಸಿಕ್ಸ್ ಮತ್ತು ಐನ್‌ಸ್ಟೈನ್’. ಮನುಷ್ಯನ ಅನುಭವಕ್ಕೆ ಬರುವ ಅನಂತ ವೈವಿಧ್ಯದ ತಿಳಿವಿಗಾಗಿ ನಡೆಸಿದ ಹುಡುಕಾಟದಿಂದ ಫಿಸಿಕ್ಸ್ ಅಥವಾ ಭೌತವಿಜ್ಞಾನ ಎಂಬ ಅಧ್ಯಯನ ರೀತಿ ಬೆಳೆದದ್ದು - ಜರ್ಮನಿಯಲ್ಲಿ ಹುಟ್ಟಿ ಅಮೆರಿಕದಲ್ಲಿ ಮರೆಯಾದ ಐನ್‌ಸ್ಟೈನ್, ಜಗತ್ತಿನಲ್ಲಿ ಎಲ್ಲರಿಗೂ ತಮ್ಮವನೆನಿಸುವಂತೆ ಸಾಗಿದ ಜೀವನರೇಖೆ - ಬಾಲ್ಯ, ಬೆರಗು, ಅರಿವು ಒಂದಾಗಿ ಮನುಷ್ಯನಲ್ಲಿ ಪ್ರಕಟವಾಗುವ ರೀತಿ - ಬಾಳು, ಬೆರಗು, ಅರಿವು ಒಂದಾಗಿ ಮನುಷ್ಯನಲ್ಲಿ ಪ್ರಕಟವಾಗುವ ರೀತಿ - ಬಾಳು, ಭಾವ, ಸ್ವಾತಂತ್ರ್ಯ, ದೇವರು, ಧರ್ಮ, ರಾಜಕೀಯ, ವಿಜ್ಞಾನಗಳನ್ನು ಶ್ರೇಷ್ಠ ವಿಜ್ಞಾನಿಯೊಬ್ಬ ಕಂಡ ಬಗೆ. ಫಿಸಿಕ್ಸ್ ಇಷ್ಟವಾದವರಿಗೆ ಕಷ್ಟವಾಗದಿರಲು ಸಾಗಬೇಕಾದ ದಾರಿ - ಇವೆಲ್ಲ ಈ ಕೃತಿಯಲ್ಲಿ ತುಂಬಿವೆ. ಗಣಿತದ ಸೂತ್ರಗಳಿಲ್ಲ, ಪಠ್ಯಗಳ ಬಿಗಿ ಬಂಧವಿಲ್ಲ, ಇರುವುದಕ್ಕಿಂತ ಹೆಚ್ಚನ್ನು ಹೇಳಬಲ್ಲ ಚಿತ್ರಗಳಿವೆ.
©2024 Book Brahma Private Limited.