ಭಾರದ ಕಲ್ಲು ನೀರಿನಲ್ಲಿ ಮುಳುಗದೇ ತೇಲುವಂತಾದರೆ? ಪೆನ್ಸಿಲ್ ಅನ್ನು ಮುಟ್ಟದೆಯೇ ನೆಟ್ಟಗೆ ನಿಲ್ಲುವಂತಿದ್ದರೆ? ಹೀಗೆ ಹೊಸ ಹೊಸ ಪ್ರಯೋಗಗಳನ್ನು ಪ್ರಯತ್ನಿಸಿಸುವುದು ಯಾರಿಗಿಷ್ಟವಿಲ್ಲ ಹೇಳಿ? ವಿಜ್ಞಾನ, ಅನ್ವೇಷಣೆ ಎಲ್ಲ ವಯೋಮಾನದವರಿಗೂ ಇಷ್ಟವಾಗುವ ಹವ್ಯಾಸ.
ಅರವಿಂದ ಗುಪ್ತ ಅವರ ವಿಜ್ಞಾನದಲ್ಲಿ ಮೋಜು ಕೃತಿಯು ನಮ್ಮ ಹವ್ಯಾಸಕ್ಕೆ ಸ್ಪೂರ್ತಿ ನೀಡುವ ಕೃತಿ. ವಿ.ಎಸ್.ಎಸ್. ಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿಯಲ್ಲಿ ಸುಮಾರು 51 ಬಗೆಯ ವಿಭಿನ್ನ ಪ್ರಯೋಗಗಳನ್ನು ಮಾಡಲಾಗಿದೆ. ಚಿತ್ರ ಸಮೇತವಾಗಿ ಪ್ರಯೋಗ ಮಾಡುವ ವಿಧಾನ ವಿವರಿಸಿರುವುದರಿಂದ ಪ್ರಯೋಗಿಸಲು ಸರಳ ಹಾಗೂ ಸುಲಭ ಎನಿಸಲೂ ಬಹುದು. ಸುಂಟರಗಾಳಿಯ ಬಾವಿ, ಜೀವವೃಕ್ಷ, ಪ್ರೊಪ್ಪೆಲ್ಲರ್ ತಿರುಗಿದಾಗ ಕುಣಿಯುವ ಗೊಂಬೆ ಪ್ರಯೋಗಗಳು ಮೋಜೆನಿಸುತ್ತವೆ.
©2024 Book Brahma Private Limited.