ಲೇಖಕ ಕೊಳ್ಳೆಗಾಲ ಶರ್ಮ ಅವರು ಮಕ್ಕಳಿಗಾಗಿ ಬರೆದ ವೈಜ್ಞಾನಿಕ ಮಾಹಿತಿಪೂರ್ಣ ಕೃತಿ-ಇದೇಕೆ ಹೀಗೆ?. ಮಕ್ಕಳಲ್ಲಿ ವೈಜ್ಞಾನಿಕ ಜ್ಞಾನದ ಹಸಿವು ಹೆಚ್ಚಬೇಕು. ಪ್ರಶ್ನೆಗಳು ಹುಟ್ಟಬೇಕು. ಕುತೂಹಲ ಹೆಚ್ಚಿಸಿಕೊಳ್ಳುವ ಮೂಲಕ ಸಂಶೋಧನಾ ದೃಷ್ಟಿ ಬೆಳೆಸಿಕೊಳ್ಳಬೇಕು. ಮಾತ್ರವಲ್ಲ; ಮಕ್ಕಳು ವೈಜ್ಞಾನಿಕ ಮನೋಭಾವದವರಾಗಬೇಕು ಎಂಬುದು ಈ ಕೃತಿಯ ಉದ್ದೇಶ ವಿಜ್ಞಾನದ ಸಂಕೀರ್ಣ ಪರಿಕಲ್ಪನೆಗಳನ್ನು ಅತ್ಯಂತ ಸರಳವಾಗಿ ವಿವರಿಸಿದ್ದು ಕೃತಿಯ ವೈಶಿಷ್ಟ್ಯ. ನಾವು-ನಮ್ಮವರು, ಯಂತ್ರ-ತಂತ್ರ, ಸದ್ದಯ ಬೆಳಕು, ಪ್ರಪಂಚ, ಕೌತುಕ, ಪ್ರಕೃತಿ ಹೀಗೆ ವಿವಿಧ ಅಧ್ಯಾಯಗಳು ಮಕ್ಕಳ ತಿಳಿವಳಿಕೆಯ ಕುತೂಹಲವನ್ನು ಹೆಚ್ಚಿಸುವಂತಿವೆ.
©2024 Book Brahma Private Limited.