ರಸಾಯನಶಾಸ್ತ್ರದ ಅರಿವು

Author : ಇಂದುಮತಿ ರಾವ್

Pages 339

₹ 135.00




Year of Publication: 2012
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು,
Address: ಬೆಂಗಳೂರು

Synopsys

ಖ್ಯಾತ ವಿಜ್ಞಾನಿ ಡಾ. ಸಿ.ಎನ್. ಆರ್. ರಾವ್ ಅವರ ಆಂಗ್ಲಕೃತಿಯನ್ನು ಅವರ ಪತ್ನಿ ಇಂದುಮತಿ ರಾವ್ ಅವರು ಕನ್ನಡೀಕರಿಸಿದ ಕೃತಿ-ರಸಾಯನಶಾಸ್ತ್ರದ ಅರಿವು. ರಸಾಯನ ಶಾಸ್ತ್ರದ ಮಹತ್ವ, ಅದರ ವ್ಯಾಪ್ತಿ, ದಿನನಿತ್ಯದ ಬದುಕಿನಲ್ಲಿ ರಸಾಯನ ಶಾಸ್ತ್ರದ ಬಳಕೆ, ಆಧುನಿಕ ಸಂಶೋಧನೆಗಳಲ್ಲಿ ರಸಾಯನ ಶಾಸ್ತ್ರದ ಅಗತ್ಯ ಹಾಗೂ ಅನಿವಾರ್ಯತೆ ಇತ್ಯಾದಿ ಇಂತಹ ವಿಷಯಗಳನ್ನು ಒಳಗೊಂಡ ಕೃತಿ. ಮಕ್ಕಳಿಗೂ-ದೊಡ್ಡವರಿಗೂ ಅಷ್ಟೇಕೆ? ಸಂಶೋಧನಾ ವಿದ್ಯಾರ್ಥಿಗಳಿಗೂ ತುಂಬಾ ಉಪಯುಕ್ತವಾದ ಕೃತಿ ಇದು.

About the Author

ಇಂದುಮತಿ ರಾವ್

ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌ ರಾವ್‌ ಅವರದು ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್‌ ಈ ಹಿಂದೆ ಬೆಂಗಳೂರಿನ ಎಂ.ಇ.ಎಸ್‌ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುತ್ತಿದ್ದಾರೆ. ಪುತ್ರ, ಸಂಜಯ್‌ ರಾವ್‌ ಕೂಡ ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಪುತ್ರಿ, ಸುಚಿತ್ರಾ ರಾವ್‌ ಅವರ ಪತಿ, ಕೆ.ಎನ್‌. ಗಣೇಶ್‌ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು. ...

READ MORE

Related Books