’ವಿಜ್ಞಾನ ಹೊತ್ತಿಗೆ’ ಕೃತಿಯು ಚನ್ನಪ್ಪ ಕೆ.ಎಂ ಅವರ ಪಠ್ಯ ಆಧಾರಿತ ವಿಜ್ಞಾನ ಕೃತಿಯಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ರಚಿತವಾದ ಈ ಕೃತಿಯು ಜ್ಞಾನಕ್ಕಾಗಿ ವಿಜ್ಞಾನ ಅನ್ನುವ ವಿಚಾರವನ್ನು ಒಳಗೊಂಡಿದೆ. ಗುಣಾತ್ಮಕ ಶಿಕ್ಷಣಕ್ಕೆ ಮತ್ತು ವಿಜ್ಞಾನ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕಡಿಮೆ ಖರ್ಚಿನ ಕಲಿಕೋಪಕರಣಗಳನ್ನು ತಯಾರಿಸಿ ಹಾಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬಹುದು ಎಂಬುದನ್ನು ತಿಳಿಸಲಾಗಿದೆ. ಲೇಖಕ ಚನ್ನಪ್ಪ ಅವರು ಪರೀಕ್ಷಾ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ ಕಾರ್ಯಗಾರರಾಗಿ. ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದು, ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಹೇಳುತ್ತಾರೆ. ’ವಿಜ್ಞಾನ ಹೊತ್ತಿಗೆ’ ಕೃತಿಯು ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿಯನ್ನು ನೀಡುತ್ತದೆ.
©2024 Book Brahma Private Limited.