ಲಿಂಗರಾಜ ವೀ. ರಾಮಾಪೂರ ಅವರ ಕೃತಿ-ಅಗಸ್ತ್ಯಾದಿಂದ ನಾಸಾದವರೆಗೆ. ವಿಜ್ಞಾನದ ಇತಿಹಾಸದ ದಾಹವನ್ನು ನೀಗಿಸುವ ವಿಜ್ಞಾನದಲೆದಾಟ. ಹೋದಲ್ಲೆಲ್ಲಾ ವಿಜ್ಞಾನದ ಕೌತುಕಗಳನ್ನು, ವಿಸ್ಮಯಗಳನ್ನು, ಅದರ ಇತಿಹಾಸವನ್ನು ತಿಳಿದುಕೊಳ್ಳುವ ವಿಜ್ಞಾನದ ದಾಹ. ವಿಜ್ಞಾನದ ಸೂಕ್ಷ್ಮ ಒಳಗಣ್ಣಿನಿಂದ ಪ್ರಪಂಚವನ್ನು ನೋಡುವ ಪುಟ್ಟ ಪ್ರಯತ್ನದ ಭಾಗ. “ಕೋಶ ಓದು ಇಲ್ಲವೇ ದೇಶ ಸುತ್ತು” ಎನ್ನುವಂತೆ ನಾನು ಓದುವುದಕ್ಕಿಂತ ಜ್ಞಾನದ ಹುಡುಕಾಟದಲ್ಲಿ ಅಲೆದದ್ದೇ ಹೆಚ್ಚು. ಮನುಷ್ಯ ನಿಸರ್ಗದ ಕೂಸಾಗಿದ್ದು ಅಲೆಯುವ ಸಂದರ್ಭಗಳಲ್ಲಿ ನಿಸರ್ಗವನ್ನು ಅರಿಯುತ್ತ ವಿಶೇಷ ಜ್ಞಾನವನ್ನು ಪಡೆಯುವ ಪ್ರಯತ್ನ ಮಾಡಿದ್ದೇನೆ. ಕರ್ನಾಟಕದ ಕೆಲವು ಪ್ರದೇಶಗಳು, ಹೊರ ರಾಜ್ಯದ ಕೆಲ ಸ್ಥಳಗಳು ಅಲ್ಲದೇ ಹೊರ ದೇಶದ ಕೆಲ ಸ್ಥಳಗಳಲ್ಲಿ ವಿಜ್ಞಾನದ ವಿದ್ಯಮಾನಗಳು ಹಾಗೂ ವಿಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲ ಪ್ರಯತ್ನಗಳು ಹೇಗೆಲ್ಲಾ ನಡೆಯುತ್ತಿವೆ ಎಂಬುದನ್ನು ತೋರಿಸುವ ಪುಟ್ಟ ಪ್ರಯತ್ನವೇ ಈ ಪುಸ್ತಕ “ಅಗಸ್ತ್ಯದಿಂದ ಅಮೆರಿಕದ ನಾಸಾದವರೆಗೆ” ವಿಜ್ಞಾನದಲೆದಾಟ ಎನ್ನುತ್ತಾರೆ ಲೇಖಕರು. .
©2025 Book Brahma Private Limited.