ಲೇಖಕ ಡಾ. ಜಿ.ಆರ್. ಲಕ್ಷ್ಮಣರಾವ್ ಅವರ ಕೃತಿ-ವಿಜ್ಞಾನ ಎಂದರೇನು? ವಿಜ್ಞಾನ ವಿಲ್ಲದೇ ಪ್ರಕೃತಿಯೂ ಇಲ್ಲ. ಪ್ರಕೃತಿ ಯಲ್ಲೇ ವಿಜ್ಞಾನವಿದೆ. ವಿಜ್ಞಾನದ ಪ್ರಭಾವವನ್ನು ವ್ಯಕ್ತಿಯೊಬ್ಬ ತಿಳಿದು ನಡೆಯುವುದು ಹೇಗೆ ? ವಿಜ್ಞಾನವು ಬೀರುವ ಸಾಮಾಜಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳಾವುವು ? ವಿಜ್ಞಾನ ಎಂದರೇನು ? ಎಂಬ ಈ ಕೃತಿಯಲ್ಲಿ ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಪ್ರಕ್ರಿಯೆಯಲ್ಲಿ ವಿಜ್ಞಾನದ ವಿಧಾನ, ವೈಜ್ಞಾನಿಕ ಮನೋಭಾವದಂಥ ಸಂಬಂಧಿತ ವಿಚಾರಗಳೂ ಬರುತ್ತವೆ. ಮಕ್ಕಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಹೆಚ್ಚುವಂತೆ ಮಾಡಲು ಆಯಾ ವಿಷಯಕ್ಕೆ ಸಂಬಂಧಿಸಿದ ರೇಖಾಚಿತ್ರಗಳೇ ಅಲ್ಲದೆ, ವಿಶೇಷವಾಗಿ ವರ್ಣಚಿತ್ರಗಳನ್ನು ನೀಡಿದ್ದು ಈ ಕೃತಿಯ ಹೆಗ್ಗಳಿಕೆ.
©2024 Book Brahma Private Limited.