ಪ್ರಚಾರವೇ ಸಿಗದಿರುವ, ಜನಸಾಮಾನ್ಯರಿಗೆ ತಿಳಿಯದ ಅನೇಕ ಸಂಶೋಧನೆಗಳಿದ್ದು, ಅವು ವೈಜ್ಞಾನಿಕ ಮುನ್ನಡೆಗೆ ಕಾರಣವಾಗಿರುವುದನ್ನು ನಾವು ಮರೆಯುವಂತಿಲ್ಲ. ಸದಾ ಸಂಶೋಧನೆ ನಿರತರಾಗಿರುವ ವಿಜ್ಞಾನಿಗಳು ಸಫಲತೆಯನ್ನು ನಿರೀಕ್ಷಿಸುವುದು ಸಹಜವೇ. ಆದರೂ ಎಷ್ಟೋ ಸಲ ಸೋಲು, ಹತಾಶೆಗಳನ್ನು ಅನುಭವಿಸಬೇಕಾಗುತ್ತದೆ. ಸಂಶೋಧನೆಯ ಮಾರ್ಗದಲ್ಲಿ ದುರಂತಗಳು ಸಂಭವಿಸಿದ್ದು ಉಂಟು. ಅಂತಹವುಗಳ ಸಂಶೋಧನೆಯನ್ನು ಹಾಗೂ ಜಗತ್ತಿನ ಅನೇಕ ರೋಚಕ ವಿಷಯಗಳನ್ನು ಲೇಖಕ ಕೈವಾರ ಗೋಪಿನಾಥ ಅವರು ಸವಿವರವಾಗಿ ಬರೆದಿದ್ದಾರೆ.
©2025 Book Brahma Private Limited.