ವಿಜ್ಞಾನದ ಇತಿಹಾಸವನ್ನು ಕುರಿತು ಜೆ.ಡಿ. ಬರ್ನಾಲ್ ಅವರು ಬರೆದಿರುವ ಬೃಹತ್ ಹಾಗೂ ವಿದ್ವತ್ಪೂರ್ಣ ಕೃತಿಯ ಅನುವಾದ ಕೃತಿಯಾಗಿದೆ ಇದು. ನಾಲ್ಕು ಸಂಪುಟಗಳಲ್ಲಿ ಮೊದಲನೆಯ ಸಂಪುಟ ಇದು. ವಿಜ್ಞಾನದ ಸೂರ್ಯನ ಉದಯವನ್ನು ಬಣ್ಣಿಸುತ್ತಾ ಬರ್ನಾಲ್ ಅವರು ಪ್ರಾಚೀನ ಜಗತ್ತಿನಲ್ಲಿ ವಿಜ್ಞಾನದ ಬಗೆ, ವ್ಯವಸಾಯ ಮತ್ತು ನಾಗರಿಕತೆಯ ಜೊತೆಯಲ್ಲಿ ಅದು ಹೇಗೆ ಬೆಳೆದು ಬಂದಿತು ಎಂಬುದನ್ನು ಹಾಗೂ ಕಬ್ಬಿಣದ ಯುಗದ ಅಭಿಜಾತ ಸಂಸ್ಕೃತಿಯ ಮೂಲಕ ಹಾದು ಧಾರ್ಮಿಕ ಶ್ರದ್ಧೆಯ ಯುಗದಲ್ಲಿ, ಊಳಿಗಮಾನ್ಯ ಸನ್ನಿವೇಶದ ಕತ್ತಲೆಯುಗದಲ್ಲಿ ಹಾಗೂ ನಂತರದ ಮಧ್ಯ ಯುಗದಲ್ಲಿ ಅದರ ಬೆಳವಣಿಗೆ ಕುರಿತು ತಲಸ್ಪರ್ಶಿಯಾದ ವಿಶ್ಲೇಷಣೆಯನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.