ಲೇಖಕ ಬೆ.ಗೋ. ರಮೇಶ್ ಅವರು ಮಕ್ಕಳಲ್ಲಿ ವೈಜ್ಞಾನಿಕತೆಯನ್ನು ಬೆಳೆಸುವ ಉದ್ದೇಶದೊಂದಿಗೆ ಇಂಗ್ಲಿಷಿನಲ್ಲಿರುವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದೇ -ನಿಮಗಿದು ಗೊತ್ತೇ? ಏಕೆ ಎಂದು ಹೇಳಿ. ಮಕ್ಕಳ ಸಣ್ಣ ಸಣ್ಣ ಪ್ರಶ್ನೆಗಳು ವೈಜ್ಞಾನಿಕವಾಗಿ ಬಹುದೊಡ್ಡ ಸವಾಲಾಗಿ ಪರಿಗಣಿಸಿ, ಹತ್ತು ಹಲವು ವಿಜ್ಞಾಣದ ಚಟುವಟಿಕೆಗಳಿಗೆ, ಸಿದ್ಧಾಂತಗಳಿಗೆ ಮೂಲ ಕಾರಣವಾಗುತ್ತವೆ ಎಂಬುದನ್ನು ತಿಳಿಸುವ ಕೃತಿ ಇದು. ತಮ್ಮ ಸುತ್ತಮುತ್ತಲಿರುವ ಸಣ್ಣ ಸಣ್ಣ ವಿಷಯಗಳು ಸಹ ಹೇಗೆ ವಿಜ್ಞಾನದ ವಿಷಯ ವಸ್ತುವಾಗುತ್ತವೆ ಎಂಬುದರ ಸೂಕ್ಷ್ಮತೆಯನ್ನೂ ಈ ಕೃತಿ ತಿಳಿಸುತ್ತದೆ. ಒಂದು ವೇಳೆ ತಿಳಿಯದಿದ್ದರೆ, ಪ್ರಶ್ನೆ ಮಾಡುವ ಮನೋಭಾವವನ್ನೂ ಸಹ ಈ ಕೃತಿಯು ಮಕ್ಕಳಲ್ಲಿ ಹುಟ್ಟುಹಾಕುತ್ತದೆ.
©2025 Book Brahma Private Limited.