‘ಆವರ್ತ ಕೋಷ್ಟಕ-ಒಂದು ಪರಿಚಯ’ ವಿಜ್ಞಾನಿ ಸಿ.ಎನ್.ಆರ್. ರಾವ್ ಹಾಗೂ ಇಂದುಮತಿ ರಾವ್ ಅವರ ಆಂಗ್ಲ ಕೃತಿಯನ್ನು ಟಿ. ಗೋವಿಂದ ರಾಜು ಕನ್ನಡಕ್ಕೆ ಅನುವಾದಿಸಿದ್ದಾರೆ. ಆವರ್ತ ಕೋಷ್ಟಕದ ಆವಿಷ್ಕಾರವು ವಿಜ್ಞಾನದಲ್ಲಿ ಒಂದು ಪ್ರಮುಖ ಹೆಜ್ಜೆ. ಅಣುಗಳ ಹಾಗೂ ವಸ್ತುಗಳ ವಿವಿಧ ಅಂಶಗಳನ್ನು ತಿಳಿಯಲು, ಊಹಿಸಲು ಹಾಗೂ ವಿನ್ಯಾಸಗೊಳಿಸಲು ಈ ಕೋಷ್ಟಕವನ್ನು ಬಳಸಲಾಗುತ್ತದೆ. ಧಾತುಗಳನ್ನು ವರ್ಗೀಕರಿಸುವ ಅಗತ್ಯತೆ ಹಾಗೂ ವರ್ಗೀಕರಿಸಲು ಬಳಸಿದ ವಿಧಾನಗಳು ಆವರ್ತ ಕೋಷ್ಟಕವನ್ನು ರಚಿಸುವಲ್ಲಿ ಪ್ರೇರಣೆಯಾಗಿವೆ. ಇವುಗಳ ಸಂಪೂರ್ಣ ಮಾಹಿತಿಯನ್ನು ಈ ಕೃತಿಯಲ್ಲಿ ನೀಡಲಾಗಿದೆ. ವಿಜ್ಞಾನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿಜ್ಞಾನಿಗಳಿಗೂ ಈ ಕೋಷ್ಟಕ ಉಪಯುಕ್ತ ಆಕರ ಕೃತಿಯಾಗಿದೆ ಎಂದು ಲೇಖಕ ಹಾಗೂ ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್ ಅಭಿಪ್ರಾಯಪಟ್ಟಿದ್ದಾರೆ.
ಆವರ್ತ ಕೋಷಕ - ಒಂದು ಪರಿಚಯ
ವಿಶ್ವಸಂಸ್ಥೆಯು 2019 ಇಸ್ತಿಯನ್ನು ಆವರ್ತ ಕೋಷಕದ ವರ್ಷವನ್ನಾಗಿ ಘೋಷಿಸಿದ ಸಂಭ್ರಮದಲ್ಲಿ ನವಕರ್ನಾಟಕ ಸಂಸ್ಥೆಯು ಹೊರತಂದ ವಿಶಿಷ್ಟ ಕೃತಿ ‘ಆವರ್ತ ಕೋಷ್ಟಕ - ಒಂದು ಪರಿಚಯ'. ಹಿರಿಯ ವಿಜ್ಞಾನಿ ಸಿ.ಎನ್.ಆರ್. ರಾವ್ ಮತ್ತು ಇಂದುಮತಿ ರಾವ್ ಅವರು ಬರೆದಿರುವ ಈ ಪುಟ್ಟ ಪುಸ್ತಕವನ್ನು ಕನ್ನಡಕ್ಕೆ ತಂದವರು ಟಿ. ಗೋವಿಂದ ರಾಜು. ಕೃತಿಯನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿಜ್ಞಾನವನ್ನು ಪ್ರೀತಿಸುವ ಎಲ್ಲರಿಗೂ ಕೃತಿಯನ್ನು ಅರ್ಪಿಸಲಾಗಿದೆ.
ಪುಸ್ತಕದ ಬಗ್ಗೆ ಆರಂಭದಲ್ಲೇ ಹೇಳಿರುವ ಮಾತುಗಳಿವು: 'ಆವರ್ತ ಕೋಷ್ಟಕದ ಆವಿಷ್ಕಾರವು ವಿಜ್ಞಾನದಲ್ಲಿ ಒಂದು ಪ್ರಮುಖ ಘಟನೆಯನ್ನು ಸೂಚಿಸುತ್ತದೆ. ಇದು ಬಹುಶಃ ಅತಿ ಶ್ರೇಷ್ಠವಾದ ಮಾನವ ರಚಿತ ಕೋಷ್ಟಕ. ಇದರ ಬಳಕೆಯು ಅಪಾರ ಮತ್ತು ದೀರ್ಘಕಾಲಿಕವಾಗಿದೆ. ವಿಜ್ಞಾನಿಗಳು ಇದನ್ನು ಅಣುಗಳ ಮತ್ತು ವಸ್ತುಗಳ ವಿವಿಧ ಅಂಶಗಳನ್ನು ಊಹಿಸಲು, ವಿನ್ಯಾಸಗೊಳಿಸಲು ಅಥವಾ ವಿವರಿಸಲು ಸತತವಾಗಿ ಬಳಸುತ್ತಾರೆ. ಧಾತುಗಳನ್ನು ವರ್ಗೀಕರಿಸುವ ಅಗತ್ಯ ಮತ್ತು ವರ್ಗೀಕರಿಸಲು ಬಳಸಿದ ವಿಧಾನಗಳು ಆವರ್ತ ಕೋಷ್ಟಕವನ್ನು ರಚಿಸುವಲ್ಲಿ ಪ್ರೇರಣೆಯಾಗಿದೆ. ನಾವು ಆಧುನಿಕ ಆವರ್ತ ಕೋಷ್ಟಕದ ಪ್ರ ಮುಖ ವೈಶಿಷ್ಟ್ಯಗಳನ್ನು ಮತ್ತು ವಸ್ತುಗಳ ಲಕ್ಷಣ ಗಳನ್ನು ವಿವರಿಸಲು ಮತ್ತು ಊಹಿಸಲು ಹೇಗೆ ಆಧಾರ ಒದಗಿಸುತ್ತವೆಂಬುದನ್ನು ಈ ಕಿರುಹೊತ್ತಿಗೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ'.
ಇಷ್ಟು ಹೇಳಿದ ಮೇಲೆ ಕೃತಿಯ ಕುರಿತು ಬೇರೆ ವಿವರ ನೀಡಬೇಕಿಲ್ಲ. ಕೋಷ್ಟಕ ಮತ್ತು ಮಾಹಿತಿಯನ್ನು ನೋಡಿ ತಿಳಿದುಕೊಳ್ಳಬೇಕು. ಕನ್ನಡದಲ್ಲಿ ವಿಜ್ಞಾನ ಕೃತಿಗಳನ್ನು ನೀಡುತ್ತಿರುವ ನವಕರ್ನಾಟಕ ಪ್ರಕಾಶನದ ಉತ್ತಮ ಕಾರ್ಯದಲ್ಲಿ ಈ ಪುಟ್ಟ ಕೃತಿಯೂ ಮಹತ್ವದ್ದೇ.
ಕೃಪೆ : ಹೊಸ ದಿಗಂತ (2020 ಫೆಬ್ರವರಿ 23)
©2025 Book Brahma Private Limited.