ವಿಜ್ಞಾನದ ಇತಿಹಾಸವನ್ನು ಕುರಿತು ಜೆ.ಡಿ. ಬರ್ನಾಲ್ ಅವರು ಬರೆದಿರುವ ಬೃಹತ್ ಹಾಗೂ ವಿದ್ವತ್ಪೂರ್ಣ ಕೃತಿಯ ಅನುವಾದ ಕೃತಿಯಾಗಿದೆ ಇದು. ನಾಲ್ಕು ಸಂಪುಟಗಳಲ್ಲಿ ಮೂರನೆಯ ಸಂಪುಟ ಇದು. ಇದರಲ್ಲಿ ಎಲೆಕ್ಟ್ರಾನ್ ಮತ್ತು ಪರಮಾಣು, ಸೈದ್ಧಾಂತಿಕ ಭೌತವಿಜ್ಞಾನ, ಬೈಜಿಕ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್, ರಾಸಾಯನಿಕಗಳ ಕೈಗಾರಿಕೆ, ಜೀವರಸಾಯನ ವಿಜ್ಞಾನ, ಅಣುವಿಜ್ಞಾನ, ಸೂಕ್ಷ್ಮಜೀವಿ ವಿಜ್ಞಾನ, ವೈದ್ಯಕೀಯ ಕ್ಷೇತ್ರದಲ್ಲಿ ಜೀವರಸಾಯನ ವಿಜ್ಞಾನ, ಆನುವಂಶಿಕತೆ, ಜೀವಿ ಮತ್ತು ಪರಿಸರ ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
©2024 Book Brahma Private Limited.