ಮಕ್ಕಳಿಗಾಗಿ ವಿಜ್ಞಾನ ಬರಹಗಳನ್ನು ಬರೆಯುವ ಮೂಲಕ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವಲ್ಲಿ ಹತ್ಯು ಹಲವು ಕೃತಿಗಳನ್ನು ರಚಿಸಿದ ಲೇಖಕಿ ಗಾಯತ್ರಿ ಮೂರ್ತಿ ಅವರ ಮತ್ತೊಂದು ಕೃತಿ-ನಿಮಗಿದು ಗೊತ್ತೆ? ಎಲ್ಲಿ ಎಂದು ಹೇಳಿ. ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಕೆರಳಿಸುವ ಕೃತಿ ಇದು. ಕೇವಲ ಮಕ್ಕಳು ಮಾತ್ರವಲ್ಲ; ದೊಡ್ಡವರಿಗೂ ಈ ಮನೋಭಾವದ ಅಗತ್ಯವನ್ನು ಹಾಗೂ ಸುತ್ತಮುತ್ತಲಿನ ಸಣ್ಣ ಸಣ್ಣ ವಿಷಯಗಳನ್ನು ವೈಜ್ಞಾನಿಕವಾಗಿ ತಿಳಿಯುವಲ್ಲಿ ಈ ಕೃತಿಯು ಅತ್ಯಂತ ಉಪಯುಕ್ತವಾಗಿದೆ. ಮಕ್ಕಳ ಕುತೂಹಲಕಾರಿ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡುವ ಇಲ್ಲಿಯ ಬರಹಗಳ ವಿವರಣೆಯು ಅತ್ಯಂತ ಸರಳವೂ, ಸುಲಭವೂ ಇದೆ. ಇಂತಹ ಸಾಮಾನ್ಯ ಹಾಗೂ ಸಣ್ಣ ಪ್ರಶ್ನೆಗಳು ನಮಗೆ ನೀಡುವ ಅಗಾಧ ಜ್ಞಾನ ಭಂಡಾರವಾಗಿ ಈ ಕೃತಿ ಇದೆ.
©2025 Book Brahma Private Limited.