ಬ್ರಹ್ಮಾಂಡ ರಚನೆ ಕುರಿತು ಹಲವಾರು ಸಿದ್ಧಾಂತಗಳಿವೆ. ಕೆಲವು ತರ್ಕಕ್ಕೆ ನಿಲುಕದ್ದು ಅನ್ನುವ ಒಂದೇ ಕಾರಣಕ್ಕೆ ಧಿಕ್ಕರಿಸಿದ್ದೂ ಇದೆ. ‘ತರ್ಕಕ್ಕೆ ನಿಲುಕಲಿಲ್ಲ ಸತ್ಯ.’ ಆದರೆ ‘ನನ್ನ ತರ್ಕಕ್ಕೆ ನಿಲುಕಲಿಲ್ಲ,’ ಇದು ಮೀರಿದ ಸತ್ಯವಾ? ಜ್ಞಾನ, ವಿಜ್ಞಾನ, ಅಜ್ಞಾನ ಅನಿಸಿದ್ದರೆ ಅದರಲ್ಲಿ ನನ್ನ ಮೌಢ್ಯದ್ದೂ ಪಾಲಿರಬಹುದಾ? ಎಂಬ ಪ್ರಶ್ನೆಗಳನ್ನು ಈ ಪುಸ್ತಕ ಕೆದಕುತ್ತದೆ.
ಆದಿಯಲ್ಲಿದ್ದದ್ದು ನೀರು, ಮೊದಲ ಜೀವ ಸಸ್ಯ, ಪಾಚಿ ರೂಪದಲ್ಲಾಯಿತು.. ನಂತರ ಭೂಮಿ, ತದನಂತರ ಮಿಕ್ಕೆಲ್ಲವೂ ಬದುಕಿನ ಅವಶ್ಯಕತೆಗೆ ಬೇಕಾದ್ದೆಲ್ಲ ಉಂಟಾದ ನಂತರ ಮನುಷ್ಯ. ಉದ್ದಕ್ಕೂ ಸೂರ್ಯನ ಸಹಕಾರ, ಕಾವಿಲ್ಲದೆ ಜೀವವಿಲ್ಲ, ದಿನದಿಂದ ದಿನಕ್ಕೆ ಕಾವು ಹೆಚ್ಚುತ್ತ ಹೋಗಿ, ಕೊನೆಗೆ ಜೀವಗಳೇ ಇಲ್ಲದಾಗುವುದು ಪ್ರಳಯ. ಮತ್ತೆ ಮಳೆ. ಎಲ್ಲ ಕಡೆ ನೀರು, ಇದರ ಪುನರಾವರ್ತನೆ ? ಮತ್ತೆ ಸಸ್ಯ, ಪಾಚಿ ರೂಪದಲ್ಲಿ, ಇದು ವಿಜ್ಞಾನ ಪ್ರತಿಪಾದಿಸಿದ ಸತ್ಯ. ಇದು ಒಂದು ಕಲ್ಪನೆ ಅಂತ ಯಾವುದೋ ಕಾಲದಲ್ಲಿ ಗುರುತಿಸಿದ್ದರು ಅಂತನ್ನುವುದು ಈ ಮಣ್ಣಿನ ಜ್ಞಾನ ಎಂಬುದಕ್ಕೆ ವಿವರಗಳನ್ನು ನೀಡುತ್ತಾರೆ ಲೇಖಕರು.
©2025 Book Brahma Private Limited.