ಲೇಖಕಿ ಸುಧಾ ಸರನೋಬತ್ ಮೂಲತಃ ವಿಜಾಪುರ(ವಿಜಯಪುರ) ಜಿಲ್ಲೆಯವರು. ಕಳೆದ ಐದು ದಶಕಗಳಿಂದ ಹಾಸ್ಯ ಲೇಖನಗಳನ್ನು, ಲಘು ಪ್ರಬಂಧಗಳನ್ನು ಬರೆಯುತ್ತಿದ್ದು, ಅವರ ಬರೆಹಗಳು ಜನಪ್ರಿಯ ವಾರ ಪತ್ರಿಕೆಗಳಾದ ಸುಧಾ, ಕರ್ಮ ವೀರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಅಲ್ಲದೆ ‘ಚಿನ್ನದಂತ ಗಂಡ’, ‘ಅರ್ಧಾಂಗಿಯ ಅನರ್ಥ ಕೋಶ’ , ‘ಹೆಸರಿನಲ್ಲೇನಿದೆ ಮಹಾ’, ‘ಕೊರೊನಾ ಟೈಮ್ಸ್’ ಎಂಬ ಹಾಸ್ಯ ಲೇಖನ ಸಂಕಲನಗಳು ಪ್ರಕಟಗೊಂಡಿವೆ. ಇವರ ‘ಚಿನ್ನದಂತ ಗಂಡ’ ಹಾಸ್ಯ ಸಂಕಲನಕ್ಕೆ ‘ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’, ಹಾಗೂ ಸಮಗ್ರ ಹಾಸ್ಯ ಸಾಹಿತ್ಯಕ್ಕೆ ಗೋರೂರು ಪ್ರಶಸ್ತಿ, " ಉದರಾಯಣ " ಪ್ರಬಂಧಕ್ಕೆ ಮಾಹಾರಾಷ್ಟ್ರದ ಡೊಂಬಿವಲಿ ಕರ್ನಾಟಕ ಸಂಘದ ವತಿಯಿಂದ ಅತ್ಯುತ್ತಮ ಲಲಿತ ಪ್ರಬಂಧ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಸಾಹಿತ್ಯದ ಜೊತೆಗೆ ಸಂಗೀತ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.