About the Author

ಕವಿ ಎಂ. ಜಿ. ಗಂಗನಪಳ್ಳಿಯವರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರು. ರೆಡಿಯೋ ಚಿಂತನೆಗಳು, ಕವನಗಳು, ಶರಣ-ಸಂತರ-ಜೀವನ ವಿಚಾರಗಳ ಪುಸ್ತಕಗಳನ್ನು ರಚಿಸಿದ್ದಾರೆ. 2009ನಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ - 2010ರ ಸಾಲಿನಲ್ಲಿ ಬೀದರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅರಣ್ಯ ಇಲಾಖೆಯ ಒಡನಾಡಿಯಾಗಿದ್ದ ಅವರು ಪರಿಸರ ಉಸಿರಾಡುವ ಗಾಳಿ, ಪ್ರಕೃತಿ- ಮಾನವನ ಸಂಬಂಧ ಅರಣ್ಯ ಬೆಳೆಸುವ ಹಾಗೂ ರಕ್ಷಿಸುವ ಕಳಕಳಿಯ ಕವನಗಳನ್ನು ಹಾಡಲು ಬರುವಂತೆ  ರಚಿಸಿದ್ದು, ಅರಣ್ಯ ಇಲಾಖೆಯು ಈ ಕವನಗಳ ಸಂಗ್ರಹ ‘ವನಸಿರಿ’ ಪ್ರಕಟಿಸಿದೆ.

ಕೃತಿಗಳು: ವನಸಿರಿ (ಪರಿಸರ ಸಂಬಂಧಿ ಕವನ ಸಂಕಲನ), ವೃಕ್ಷಮಿತ್ರ (ಹೂ-ಬೇವು-ಆಲ, ಹೊಂಗೆ, ಬಸವನ ಪಾದ, ಜಟ್ರೋಪ ಶ್ರೀಗಂಧ ಎಲೆ, ಮರ, ಮಳೆ, ಬೀಜ- ವೃಕ್ಷಗಳ ವೃತ್ತಾಂತ)

 

ಎಂ.ಜಿ. ಗಂಗನಪಳ್ಳಿ