ಯೋಗ ಎಂದರೇನು? ಯೋಗ ಮಾಡುವ ವಿಧಾನ. ಯೋಗದ ಉಪಯೋಗಗಳ ಕುರಿತು ಮಾಹಿತಿ ನೀಡುವ ಕೃತಿ ಇದಾಗಿದೆ. ಯೋಗಾಭ್ಯಾಸ ಆರಂಭಿಸುವವರಿಗೆ ಈ ಕೃತಿಯು ಪರಿಚಯಾತ್ಮಕ ಕೃತಿಯಾಗಿದೆ.
ಹೊಸತು- 2004-ಫೆಬ್ರವರಿ
ಯೋಗಾಭ್ಯಾಸ ದೇಹ ಮತ್ತು ಮನಸ್ಸುಗಳಿಗೆ ಚೈತನ್ಯವನ್ನೀಯುವ ಒಂದು ಸಾಧನ. ದೇಹಕ್ಕೆ ಸಂಬಂಧಿಸಿದಂತೆ ಅದು ಸಂಪೂರ್ಣ ಭೌತಿಕ ತತ್ವಗಳಿಗೆ ಬದ್ಧವಾಗಿದ್ದು ಆ ಮೂಲಕ ಚಂಚಲವಾದ ಮನಸ್ಸನ್ನು ಹತೋಟಿಗೆ ತರುವ ಅಪೂರ್ವ ವಿದ್ಯೆಯಾಗಿದೆ. ಯೋಗಾಭ್ಯಾಸಿಗಳಿಗೆ ಅನುಕೂಲವಾಗಲೆಂದು ಪೂರ್ವ ಪೀಠಿಕೆಯೊಂದಿಗೆ ಲೇಖಕರು ಯೋಗದ ಮಹತ್ವವನ್ನು ಆರಂಭದಲ್ಲಿ ತಿಳಿಸುತ್ತ ಮುಂದೆ ಕ್ರಮಬದ್ಧವಾದ ಆಸನಗಳ ಬಗ್ಗೆ ತಿಳಿಸಿದ್ದಾರೆ. ತಿಳುವಳಿಕೆ-ಸಂಯಮ-ನಿಯಮ ಇವು ಯೋಗಾಭ್ಯಾಸದಲ್ಲಿ ತುಂಬ ಅಗತ್ಯವಾಗಿದ್ದು ಅವಸರ ಸಲ್ಲದೆಂದೂ ಎಚ್ಚರಿಸಿದ್ದಾರೆ.
©2024 Book Brahma Private Limited.