ಬೋಧನೆ ಕಲಿಕೆಯ ವಿಷಯದಲ್ಲಿ ವರ್ತನವಾದದ ಪ್ರಭಾವದಿಂದ ಬಿಡಿಸಿಕೊಂಡು ಸಂರಚನವಾದ ಹಾಗೂ ವಿಮರ್ಶಾತ್ಮಕ ಭೋಧನೆಯ ಪರಿಕಲ್ಪನೆಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಿರುವುದು ಸಹಜವೇ ಆಗಿದೆ. ಆದರೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಈ ಬಗ್ಗೆ ಯಾವ ಜ್ಞಾನವೂ ಇಲ್ಲ. ಶಿಕ್ಷಣ ಇಲಾಖೆಗಳು ತಡವಾಗಿ ಅಲ್ಲಲ್ಲಿ ಚದುರಿದ ಹಾಗೆ ಈ ವಿಚಾರಗಳ ಬಗ್ಗೆ ಸೇವಾಂತರ್ಗತ ಕಾರ್ಯಾಗಾರಗಳನ್ನು ನಡೆಸುತ್ತಿವೆ. ಪ್ರಗತಿಪರವಾದ ಈ ಎರಡು ಪರಿಕಲ್ಪನೆಗಳಿಗೆ ವ್ಯಾಪಕ ಪ್ರಚಾರ ಲಭ್ಯವಾಗಬೇಕಲ್ಲದೆ ತೃಣಮೂಲದ ಶಿಕ್ಷಕರು ಸಬಲರಾಗುವ ಅಗತ್ಯವಿದೆ. ಆದುದರಿಂದಲೆ "ಸಂರಚನವಾದಿ ವಿಮರ್ಶಾತ್ಮಕ ಶಿಕ್ಷಣ" ಎಂಬ ಈ ಕೃತಿಯನ್ನು ರಚಿಸಿದ್ದೇನೆ ಎನ್ನುತ್ತಾರೆ ಲೇಖಕ ಮಹಾಬಲೇಶ್ವರ ರಾವ್. ಪರಿಕಲ್ಪನೆಗಳನ್ನು ಆಶಯಗಳನ್ನು ದುರ್ಬಲಗೊಳಿಸದೆ ಸರಳವಾಗಿ ನಿರೂಪಿಸುವ ಪ್ರಯತ್ನವಾಗಿದೆ. ಶಾಲಾ ಶಿಕ್ಷಕರ ತರಗತಿಯ ವ್ಯವಹಾರಗಳಿಗೆ ಇದೊಂದು ಉಪಯುಕ್ತವಾದ ಪುಸ್ತಕ.
©2024 Book Brahma Private Limited.