’ಸಂಪನ್ನರಿದ್ದಾರೆ ಎಚ್ಚರಿಕೆ’ ಕೃತಿಯಲ್ಲಿ ಬೀchi ಮುನ್ನುಡಿ ಹೀಗಿದೆ: ಸಂಪನ್ನ ಕಳ್ಳರು ! ಇದಂತಹ ವಿರೋಧಾಭಾಸ, ಹಾಗಂದರೆ, ಸಂಪನ್ನರ ವೇಷದಲ್ಲಿ ಇರುವ ಕಳ್ಳರು ಎಂದರ್ಥ. ಹಾಗಾದರೆ ಈ ಸಂಪನ್ನ ಕಳ್ಳರು ಎಲ್ಲಿರುತ್ತಾರೆ ? ಎಲ್ಲಿರುವುದಿಲ್ಲ? ಜೇಲೊಂದನ್ನು ಬಿಟ್ಟು, ಬೇರೆ ಎಲ್ಲೆಲ್ಲಿಯೂ ಇರುತ್ತಾರೆ. ಅಧಿಕಾರದ ಗಾದಿಗಳ ಮೇಲೆ ಮಾನ್ಯರಾಗಿ ಕುಳಿತಿದ್ದಾರೆ. ಮಠ - ಪೀಠಗಳಲ್ಲಿ ಸಂನ್ಯಾಸಿ ಸ್ವಾಮಿಗಳಾಗಿ ಪವಡಿಸಿದ್ದಾರೆ. ಸಮಾಜ ಸೇವಕರಾಗಿ, ದೇಶಭಕ್ತರಾಗಿ, ಪ್ರಜಾಮಿತ್ರರಾಗಿ, ಜ್ಞಾನೋಪದೇಶಕರಾಗಿ ಎಲ್ಲೆಲ್ಲಿಯೂ ಇದ್ದಾರೆ; ಮುಂದೂ ಇರುತ್ತಾರೆ.
’ಪ್ರಜಾಮತ’ ಪತ್ರಿಕೆಯಲ್ಲಿ ಬಹುತೇಕ ಪ್ರಕಟವಾದ ನಗೆಬರಹಗಳ ಸಂಕಲನ ಇದು. ಒಟ್ಟು ಮೂವತ್ತು ಹಾಸ್ಯ ಲೇಖನಗಳು ಕೃತಿಯಲ್ಲಿವೆ.
©2024 Book Brahma Private Limited.