ಲೇಖಕ ಎಸ್. ಗಿರಿಧರ ಅವರ ಕೃತಿ-ಸಾಧಾರಣ ಜನ ಅಸಾಧಾರಣ ಶಿಕ್ಷಕರು. ಭಾರತದ ನಿಜವಾದ ಧೀರರು ಎಂಬ ಉಪಶೀರ್ಷಿಕೆಯಡಿ ಕೃತಿ ರಚಿತವಾಗಿದೆ.
ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಕಾರ್ಯನಿಮಿತ್ತವಾಗಿ ಸುಮಾರು ಎರಡು ದಶಕಗಳಿಂದ ದೇಶದುದ್ದಗಲಕ್ಕೂ ಸುತ್ತಾಡುತ್ತಿರುವ ಎಸ್. ಗಿರಿಧರ್, ದೂರದ ಮೂಲೆಯಲ್ಲಿರುವ ಪ್ರದೇಶಗಳಿಗೆ ಸಂಚರಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಅವಲೋಕಿಸಿದ್ದಾರೆ. ಈ ಅವಧಿಯಲ್ಲಿ, ತಮ್ಮ ಆರೈಕೆಯಲ್ಲಿರುವ ಮಕ್ಕಳ ಏಳಿಗೆಗಾಗಿ ಗಾಢವಾಗಿ ಸಮರ್ಪಿಸಿಕೊಂಡಿರುವ ನೂರಾರು ಮಂದಿ ಸರ್ಕಾರಿ ಶಿಕ್ಷಕರುಗಳೊಂದಿಗೆ ಅವರು ಶಾಲಾ ಒಡನಾಡಿದ್ದಾರೆ. ಪ್ರತಿಯೊಂದು ಮಗುವೂ ಕಲಿಯಬಲ್ಲದು ಎಂಬ ಉತ್ಕಟವಾದ ನಂಬಿಕೆ ಹೊಂದಿದ್ದು, ಇದಕ್ಕೆ ಪೂರಕವಾಗಿ ಇಲ್ಲಿಯ ಬರಹಗಳಿವೆ.
ಈ ಕೃತಿಯಲ್ಲಿ ‘ನಾವೇಕೆ ಸರ್ಕಾರಿ ಶಾಲೆಗಳನ್ನು ಬೆಂಬಲಿಸಬೇಕು ಎಂಬ ಪ್ರಧಾನ ಪ್ರಶ್ನೆಯ ಮೂಲಕವೇ ಭಾರತದ ಶೈಕ್ಷಣಿಕ ಸ್ಥಿತಿಗತಿಯನ್ನು ವಿಶ್ಲೇಷಿಸಲಾಗಿದೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಮುಖ್ಯ ಶಿಕ್ಷಕರು, ಚಿಂತನಶೀಲ ಅಭ್ಯಾಸಿಗರು: ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು, ಸಮತೆ ಮತ್ತು ಗುಣಮಟ್ಟ: ಇವು ತರಬೇತಿಯಲ್ಲಿ ಪ್ರಾರಂಭವಾಗುತ್ತವೆ, ಬಗ್ಗಟ್ಟಿನ ಕೆಲಸ; ಅತೀತ ಗುರಿಗಳತ್ತ ಸೆಳೆತ, ಅಡೆತಡೆಗಳನ್ನು ಲೆಕ್ಕಿಸದ ಧೀರರು, ಕೊನೆಯ ಮಾತು: ಯಾಕೆ ಈ ಕಥನಗಳನ್ನು ಹೇಳಲೇಬೇಕು? (ಅನುರಾಗ್ ಬೆಹಾರ್) ಹೀಗೆ ವಿವಿಧ ಅಧ್ಯಾಯಗಳಡಿ ಶಿಕ್ಷಣದ ಸ್ವರೂಪ, ಉದ್ದೇಶ, ಭಾರತದ ಮಕ್ಕಳು ಪಡೆಯುತ್ತಿರುವ ಶಿಕ್ಷಣ ಎಲ್ಲವನ್ನೂ ಸಮಗ್ರವಾಗಿ ವಿವರಿಸಲಾಗಿದೆ.
©2024 Book Brahma Private Limited.