ಘನವಾದ ವಿಷಯಗಳನ್ನು ಎತ್ತಿಕೊಂಡು ಹಗುರವಾಗಿ ಹಾಗೂ ಹಗುರ ವಿಷಯವನ್ನೆತ್ತಿಕೊಂಡು ಗಂಭೀರವಾಗಿ ಬರೆಯುವುದು ಹರಟೆಗಳ ಲಕ್ಷಣ. ಹರಟೆಗಳಲ್ಲಿ ಸತ್ಯವಿರುತ್ತದೆ; ಆದರೆ, ಅಷ್ಟೇ ಉದಾಸೀನವೂ ಇರುತ್ತದೆ. ಇಂತಹ ಗುಣಲಕ್ಷಣಗಳ ಕೃತಿ-ಪೊರಕೆ. ಲೇಖಕ ಅ.ನ.ಕೃಷ್ಣರಾಯರು ಬರೆದಿದ್ದಾರೆ. ಹಳೆಯದು-ಹೊಸದು, ವಾಕ್ಚಿತ್ರ, ಆತ್ಮಹತ್ಯಾ ಯೋಗ, ಪೊರಕೆ, ಗ್ರಂಥ ವಿಮರ್ಶೆ, ನಮ್ಮೂರಿಗೆ ಬನ್ನಿ, ದೊಡ್ಡಮನುಷ್ಯ, ಪುಸ್ತಕ ಕೊಳ್ಳುವುದು ಹೀಗೆ ಒಟ್ಟು 16 ಹರಟೆಗಳು ಇಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.