‘ನೆಲೆ ನಿಂತ ನೆಲವ ನೀ ಬೆಳಗು’ ಕೃತಿಯು ಹೆಚ್. ಬಿ ಚಂದ್ರಶೇಖರ್ ಅವರ ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಗುರುರಾಜ ಕರಜಗಿ ಅವರು, ‘ನೆಲೆ ನಿಂತ ನೆಲವ ನೀ ಬೆಳಗು’ ಗ್ರಂಥ, ಶಿಕ್ಷಣ ಕಾರ್ಯದಲ್ಲಿರುವ ಎಲ್ಲರಿಗೂ, ಶಿಕ್ಷಣ ಮಂತ್ರಿಗಳು, ಶಿಕ್ಷಣ ಅಧಿಕಾರಿಗಳು, ಶಿಕ್ಷಕರು, ಡಿ.ಎಡ್, ಬಿ.ಎಡ್, ಎಮ್. ಎಡ್, ವಿದ್ಯಾರ್ಥಿಗಳು, ಪಾಲಕರು ಮತ್ತು ಆಸಕ್ತಿ ಇರುವ ಎಲ್ಲ ಸಾರ್ವಜನಿಕರಿಗೆ ಅತ್ಯಂತ ಉಪಯೋಗಿ ಕೈಪಿಡಿಯಾಗಿದೆ ಈ ಕೃತಿ. ಇದರಲ್ಲಿ ಬಂದಿರುವ ಎಲ್ಲ ಲೇಖನಗಳು ಆಗಲೇ ಬಿಡಿಬಿಡಿಯಾಗಿ ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವೆಲ್ಲವುಗಳನ್ನು ಒಂದೆಡೆಗೆ ತಂದು ಓದುಗರಿಗೆ ಉಪಕಾರ ಮಾಡಿದ್ದಾರೆ. ಒಟ್ಟಿನಲ್ಲಿ, ಇದೊಂದು ಸಂಪೂರ್ಣ ಶಿಕ್ಷಣದ ಕೈಪಿಡಿ. ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಎಲ್ಲರಿಗೂ ಪ್ರಯೋಜನವಾಗುವ, ಪ್ರಚೋದನೆ ನೀಡುವ ಈ ಗ್ರಂಥ ಅತ್ಯಂತ ಜನಪ್ರಿಯವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಇದು ಮನೆ- ಮನೆಗಳನ್ನು, ಶಾಲೆ ಕಾಲೇಜುಗಳನ್ನು, ಮುಖ್ಯವಾಗಿ ಮಕ್ಕಳನ್ನು ತಲುಪಬೇಕು’ ಎಂದಿದ್ದಾರೆ.
©2024 Book Brahma Private Limited.