ನಗೆ-ಸಿಮ್ಮು

Author : ಎಂ.ಎಸ್. ನರಸಿಂಹಮೂರ್ತಿ

Pages 120

₹ 75.00




Year of Publication: 2019
Published by: ಸಪ್ನ ಬುಕ್ ಹೌಸ್
Address: #, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಖ್ಯಾತ ಹಾಸ್ಯ ಬರಹಗಾರ ಎಂ.ಎಸ್. ನರಸಿಂಹಮೂರ್ತಿ ಅವರ ಕೃತಿ-ನಗೆ-ಸಿಮ್ಮು. ನಗೆ ಬರಹಗಳನ್ನು ಒಳಗೊಂಡಿದ್ದು, ಪಂಚುಗಳ ಮಿಂಚು ಎಂಬ ಉಪಶೀರ್ಷಿಕೆಯ ಹೊಂದಿದೆ. ನಗೆ ಬರಹ ಸಾಹಿತ್ಯ ರಚನೆ ಕಷ್ಟಕರ. ಬದುಕಿನ ಪ್ರತಿ ಕಷ್ಟಗಳನ್ನು ನಗೆಯಲ್ಲಿ ಅದ್ದಿ ಬರೆಯಬೇಕೆಂದರೆ ಬರಹಗಾರ ತನ್ನ ಬದುಕನ್ನು ಪ್ರೀತಿಸಬೇಕು. ಆಗಲೇ, ಆತ ಬದುಕಿನ ಏನೆಲ್ಲ ಕಷ್ಟಗಳನ್ನು ಹಗುರಗೊಳಿಸಿಕೊಂಡು, ಇತರರು ಸಹ ತಮ್ಮ ತಮ್ಮ ಬದುಕನ್ನು ಪ್ರೀತಿಸುವಂತೆ ಪ್ರೇರೇಪಿಸುತ್ತಾನೆ. ಇಂತಹ ನಗೆ ಬರಹಗಳ ಸಂಕಲನವಿದು.

About the Author

ಎಂ.ಎಸ್. ನರಸಿಂಹಮೂರ್ತಿ
(20 October 1949)

ಹಾಸ್ಯ ಬರಹಗಾರ, ಬಾಷಣಕಾರ ಎಂ.ಎಸ್.ನರಸಿಂಹಮೂರ್ತಿ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 1949 ಅಕ್ಟೋಬರ್ 20 ರಂದು ಜನಿಸಿದರು. ಕಾದಂಬರಿ, ಮಕ್ಕಳಸಾಹಿತ್ಯ, ವಿಚಾರ ಸಾಹಿತ್ಯ, ಹಾಸ್ಯ ಸಂಕಲನ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿರುವ ಇವರು ಇದುವರೆಗೆ 50 ಪುಸ್ತಕಗಳನ್ನು ಬರೆದಿದ್ದಾರೆ. 5000 ಕ್ಕೂ ಹೆಚ್ಚು ನಗೆ ಎಪಿಸೋಡ್‌ಗಳನ್ನು ರಚಿಸಿದ ರಾಷ್ಟ್ರೀಯ ದಾಖಲೆ ಅವರದು. 2000ಕ್ಕೂ ಹೆಚ್ಚು ಪ್ರಕಟಿತ ನಗೆ ಲೇಖನಗಳು, 100ಕ್ಕೂ ಹೆಚ್ಚು ಬಾನುಲಿ ನಾಟಕಗಳ ರಚನೆ.  ಸ್ವಯಂ ವಧು, ಶ್ರಮದಾನ, ಬಾಬ್ಬಿ, ಗೂಳಿಕಾಳಗ, ಕಂಡಕ್ಟರ್ ಕರಿಯಲಪ್ಪ, ವೈಕುಂಠಕ್ಕೆ ಬುಲಾವ್, ಕಿವುಡು ಸಾರ್ ಕಿವುಡು ಮತ್ತು ಇತರೆ ...

READ MORE

Related Books