ಮರಾಠಿಯ ಪ್ರಸಿದ್ಧ ಲೇಖಕ ಡಾ. ಆನಂದ ತೇಲ್ತುಂಬ್ಡೆ ಅವರ ‘ಮಹಾಡ್ : ಮೊದಲ ದಲಿತ ಬಂಡಾಯ' ಈ ಕೃತಿಯನ್ನು ಲೇಖಕ ಪ್ರೊ. ಅಬ್ದುಲ್ ರೆಹಮಾನ ಪಾಷಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾಡ್ ಕೆರೆ ಚಳವಳಿ, ಕೋರೆಗಾಂವ್ ದಾಳಿ ಇತ್ಯಾದಿ ಸನ್ನಿವೇಶಗಳು ದಲಿತರ ಚಳವಳಿಯ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದವು ಮಾತ್ರವಲ್ಲ; ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಸೂಕ್ತ ಪ್ರೇರಣೆಗಳೂ ಆಗಿವೆ. ಅವು ನೈಜ ಭಾರತೀಯರ ಬದುಕಿನ ಆಶಯಗಳಿಗಾಗಿ ನಡೆದ ಹೋರಾಟವೂ ಆಗಿವೆ. ಮಹಾಡ್ ಸನ್ನಿವೇಶ, ಚಳವಳಿ, ಆಶಯ, ದಲಿತರ ಐಕ್ಯತೆಯಲ್ಲಿ ಬಂದ ನೂತನ ವಿಚಾರಗಳ ಬಲವೂ ಆಗಿದೆ. ಇಂತಹ ಇತಿಹಾಸದ ದಾಖಲೆಯನ್ನು ಪುನರ್ ನೆನಪಿಸುವ ಕೃತಿಯಾಗಿ ಈ ಕೃತಿ ಮಹತ್ವದ್ದು ಎನಿಸುತ್ತದೆ.
©2024 Book Brahma Private Limited.