ಕಮ್ಯುನಿಕೇಶನ್ ಡೀಲ್ ಯೋಜನೆಗೆ ಒಂದು ನಿರ್ದಿಷ್ಟ ಸಂಘಟನಾತ್ಮಕ ತಳಹದಿಯನ್ನು ನಿರ್ಮಿಸುವ ಉದ್ದೇಶದಿಂದ 2003ರಲ್ಲಿ ಬೆಂಗಳೂರಿನಲ್ಲಿ 'ದಿ ಕಾಮ್ ಡೀಲ್ ಟ್ರಸ್ಟ್'ನ್ನು ಸ್ಥಾಪಿಸಲಾಯಿತು. ಇದರ ರೂವಾರಿ ಡಾ. ಪ್ರತಿಭಾ ಕಾರಂತ್ ಅವರು. “ದಿ ಕಾಮ್ ಡೀಲ್ ಟ್ರಸ್ಟ್'ನ ತರಬೇತಿ ಮಾಪನಗಳನ್ನು ಡಾ. ಕಾರಂತ್ ಅವರ ಮಾರ್ಗದರ್ಶನದಡಿ ಸಿದ್ದಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಗೊಂಡ ಕೃತಿಗಳಲ್ಲಿ ಕಲಿಕೆಯ ಪೂರ್ವಾಪೇಕ್ಷಿತ ಕೌಶಲಗಳು' ಒಂದು. ಇದೊಂದು ಪ್ರಾಯೋಗಿಕ ಕೈಪಿಡಿ, ಪ್ರತಿಭಾ ಕಾರಂತ್ ಈ ಪುಸ್ತಕ ಮಾಲೆಯ ಸಂಪಾದಕರು, ಡಾ. ಎಂ. ಸಿ. ಪ್ರಕಾಶ್ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಗುವಿಗೆ ಅದರ ಗುಣ ಲಕ್ಷಣದಂತೆ ಶ್ರೇಣಿಯ ರೂಪದಲ್ಲಿ ಎಂಟು ಕ್ಷೇತ್ರ ಗಳನ್ನು ಗಮನದಲ್ಲಿಟ್ಟು ಕುಶಲತೆಯನ್ನು ಹೆಚ್ಚಿಸುವ ದಿಶೆಯಲ್ಲಿ ನೀಡಬೇಕಾದ ತರಬೇತಿಯ ಕುರಿತು ಚಿಕಿತ್ಸಕರಿಗೆ ಮತ್ತು ಮಗುವಿನ ಪೋಷಕರಿಗೆ ಮಾರ್ಗದರ್ಶನ ನೀಡುವುದು ಈ ಪ್ರಾಯೋಗಿಕ ಕೈ ಪಿಡಿಗಳ ಉದ್ದೇಶವಾಗಿದೆ. ಮಕ್ಕಳಲ್ಲಿ ದೃಷ್ಟಿ ಸಂಪರ್ಕ ಹೆಚ್ಚಿಸಲು, ತಾಳ್ಮೆಯನ್ನು ವೃದ್ಧಿಸಲು ಬೇರೆ ಬೇರೆ ಆಟಗಳನ್ನು ಆಡಿಸುವ ತಂತ್ರವನ್ನು ಈ ಕೃತಿ ಹೇಳಿಕೊಡುತ್ತದೆ.
©2024 Book Brahma Private Limited.