ಕಲಾಕ್ಷೇತ್ರದ ಮೆಟ್ಟಿಲ ಮಹಿಮೆ

Author : ಸೂತ್ರದಾರ ರಾಮಯ್ಯ

Pages 234

₹ 120.00




Published by: ಮಂಗಳ ಪ್ರಕಾಶನ
Address: ಬೆಂಗಳೂರು

Synopsys

‘ಮೆಟ್ಟಿಲ ಮಹಿಮೆ’ ಕೃತಿಯು ಸೂತ್ರದಾರ ರಾಮಯ್ಯ ಅವರ ಹಾಸ್ಯಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕಲಾಕ್ಷೇತ್ರದ ಮೆಟ್ಟಿಲಿನೊಂದಿಗೆ ಸೂತ್ರಧಾರ ನಡೆಸುವ ಸಂಭಾಷಣೆಯ ರೂಪದಲ್ಲಿರುವ ಇಲ್ಲಿನ 73 ಹಾಸ್ಯಬರಹಗಳು ಕಳೆದ ಒಂದು ದಶಕದ ರಂಗಚಟುವಟಿಕೆಯನ್ನು ಮೆಚ್ಚುಗೆ, ವ್ಯಂಗ್ಯೋಕ್ತಿ, ಟೀಕೆ-ಟಿಪ್ಪಣಿಗಳೊಂದಿಗೆ ದಾಖಲಿಸುತ್ತದೆ. ಮೆಟ್ಟಿಲನ್ನು ರಂಗ ವ್ಯವಸ್ಥೆಯ ಪ್ರತೀಕವಾಗಿಸಿಕೊಂಡು ಸೂತ್ರಧಾರ ಒಟ್ಟು ರಂಗ ಚಟುವಟಿಕೆಯ ಸಾಕ್ಷಿಪ್ರಜ್ಞೆಯಂತೆ `ಪನ್‘ ಮಾಡುತ್ತ ಹೋಗುವ ಇಲ್ಲಿನ ಬರಹಗಳು ಕನ್ನಡದಲ್ಲಿ ವಿಶಿಷ್ಟವಾದವುಗಳು. ಎರಡು ದಶಕಗಳ ಹಿಂದೆ ರಂಗಭೂಮಿಗೆ ಮೀಸಲಾದ `ಸೂತ್ರಧಾರ ವಾರ್ತಾಪತ್ರ‘ಕ್ಕೆ ಈ ತರಹದ ಬರಹವನ್ನು ಆರಂಭಿಸಿದ ರಾಮಯ್ಯ, ಅದರಿಂದ ಎಷ್ಟು ಪ್ರಸಿದ್ಧರಾದರೆಂದರೆ ಅವರಿಗೆ ಸೂತ್ರಧಾರ ರಾಮಯ್ಯ ಎಂಬ ಹೆಸರೇ ಗಟ್ಟಿಯಾಯಿತು. ಮಧ್ಯೆ ನಿಂತಿದ್ದ ಬರಹಗಳನ್ನು ಪುನಃ ತಮ್ಮ `ಈ ಮಾಸ ನಾಟಕ‘ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಎಲ್. ಕೃಷ್ಣಪ್ಪ ಇವಕ್ಕೆ ಮತ್ತೊಂದು ರೀತಿಯ ಸೂತ್ರಧಾರರಾದರು. ಗುಜ್ಜಾರಪ್ಪ ಅವರ ವ್ಯಂಗ್ಯ ಚಿತ್ರಗಳ ಮೂಲಕ ಪುಸ್ತಕ ಸುಂದರವಾಗಿ ಮೂಡಿ ಬಂದಿದೆ' ಎಂದು ವಿಶ್ಲೇಷಿತವಾಗಿದೆ.

About the Author

ಸೂತ್ರದಾರ ರಾಮಯ್ಯ

ಸೂತ್ರದಾರ ರಾಮಯ್ಯ ಅವರು ಮೂಲತಃ ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿಯವರು. ಬಿ.ಎಸ್.ಸ್ಸಿ, ಎಲ್.ಎಲ್.ಬಿ ಪದವೀಧರರು. ವಿಮಾ ಇಲಾಖೆಯಲ್ಲಿ  ವೃತ್ತಿ ಜೀವನ ಆರಂಭಿಸಿದರು. ಪ್ರಸ್ತುತ ವಕೀಲಿ ವೃತ್ತಿಯಲ್ಲಿದ್ದಾರೆ. ‘ಸಂಧ್ಯಾಕಾಲ’ ನಾಟಕದ ಮುಖೇನ ರಂಗಭೂಮಿ ಪ್ರವೇಶಿಸಿದರು. ಈಡಿಪಸ್, ಚೋಮ, ಆಸ್ಪೋಟ, ಕಫನ್, ಕಾಮಗಾರಿ, ದೊಡ್ಡಪ್ಪ, ರಣಹದ್ದು, ಕತ್ತಲೆ ಬೆಳಕು, ಹುತ್ತದಲ್ಲಿ ಹುತ್ತ, ಜೈಸಿದ ನಾಯಕ, ತೆರೆಗಳು, ಸೀತಾಪಹರಣ, ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ.  ಕೃತಿಗಳು : ಮೆಟ್ಟಿಲ ಮಹಿಮೆ ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ನಾಟಕ ಅಕಾಡೆಮಿಯಿಂದ 2000ರ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.  ...

READ MORE

Related Books