ಎಷ್ಟು ಸೊಗಸು ಈ ಬದುಕು..!

Author : ಉಮೇಶ್ ಎಸ್.

Pages 108

₹ 95.00




Year of Publication: 2010
Published by: ಧಾತ್ರಿ ಪ್ರಕಾಶನ
Address: # 170, 3ನೇ ಸಿ ಅಡ್ಡರಸ್ತೆ, ವಿನಾಯಕ ಲೇಔಟ್, ನಾಗರಬಾವಿ 2ನೇ ಹಂತ, ಬೆಂಗಳೂರು-72

Synopsys

ಆಂಗ್ಲ ಲೇಖಕ ರಿಚರ್ಡ್ ಕಾರ್ಲಸನ್ ಅವರ ಕೃತಿಯನ್ನು ಲೇಖಕ ಎಸ್.ಉಮೇಶ ಅವರು ‘ಎಷ್ಟು ಸೊಗಸು ಈ ಬದುಕು...! ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬದುಕೆಂಬ ಸಾವಿರ ವಿಸ್ಮಯಗಳ ಲೋಕದೊಳಗೊಂದು ಪಯಣ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಬದುಕಿನ ಸ್ವರೂಪ-ಸ್ವಭಾವಗಳ ಬಗ್ಗೆ ಬಹು ಹಿಂದಿನಿಂದಲೂ ಚರ್ಚೆಯಾಗುತ್ತಲೇ ಬಂದಿದೆ. ಪ್ರಚೀನ ಕವಿಗಳು, ಚಿಂತಕರು ಮಾತ್ರವಲ್ಲ; ಉಪನಿಷತ್ತುಗಳ ಮೂಲಕವೂ ಬದುಕಿನ ಪ್ರಸ್ತಾಪವಾಗಿದೆ. ಬಂದಂತೆ ಸ್ವೀಕರಿಸುವುದು ಬದುಕು ಎಂದಾದರೆ, ಬದುಕಿಗೆ ಸ್ವರೂಪ ನೀಡುವವರೇ ಮನುಷ್ಯರು ಎಂದು ಅಭಿಪ್ರಾಯ ಮತ್ತೊಂದೆಡೆ. ವಿಧಿ ನಿರ್ಧರಿಸಿದಂತೆ ಬದುಕು ರೂಪು ಪಡೆಯುತ್ತದೆ. ಮನುಷ್ಯನ ಪ್ರಯತ್ನದಲ್ಲಿ ಬದುಕು ರೂಪುಗೊಳ್ಳದು ಅಥವಾ ಆ ಬದುಕು ಮನುಷ್ಯನ ನಿಯಂತ್ರಣದಲ್ಲಿರದು ಎಂದೆಲ್ಲಾ ಚರ್ಚೆಗೆ ಒಳಗಾಗಿದ್ದು ಮಗದೊಂದು ಕಡೆ. ಕೆಲವರಿಗೆ ಬದುಕು ಸುಂದರವಾಗಿ ಕಂಡರೆ ಮತ್ತೊಬ್ಬರಿಗೆ ಕುರೂಪಿಯಾಗಿ, ವಿಕೃತವಾಗಿ ಕಂಡಿದೆ. ಈ ಕೃತಿಯಲ್ಲಿ, ಲೇಖಕರು ಬದುಕಿನ ಸೌಂದರ್ಯ ಕುರಿತು ವರ್ಣಿಸಿದ್ದಾರೆ. ಅದರ ಧನಾತ್ಮಕ ಅಂಶಗಳ ಕುರಿತು ಚರ್ಚಿಸಲಾಗಿದೆ.

About the Author

ಉಮೇಶ್ ಎಸ್.

ಲೇಖಕ ಉಮೇಶ್ ಎಸ್. ಅವರು ಮೂಲತಃ ಮೈಸೂರಿನವರು. ಸಮಕಾಲೀನಕ್ಕೆ ಸ್ಪಂದಿಸುತ್ತಲೇ ಬರವಣಿಗೆಯನ್ನು ಮುಂದುವರಿಸುತ್ತಾರೆ. ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ, ತಾಷ್ಕೆಂಟ್ ಡೈರಿ’ ಅವರ ಇತ್ತಿಚಿನ ಪ್ರಕಟಿತ ಕೃತಿಗಳು. ...

READ MORE

Related Books