ಬಾಗೂರು ಮಾರ್ಕಾಂಡೇಯ ಅವರು ಮಕ್ಕಳ ಮನೋವಿಕಾಸದ ದೃಷ್ಟಿಯಿಂದ ರಚಿಸಿದ ಕೃತಿ-ಚುಕ್ಕಿಚಿತ್ರ ನೀವೂ ರಚಿಸಬೇಕೆ?. ಚಿತ್ರಕಲಾ ಶಿಕ್ಷಣಕ್ಕೆ ಉಪಯುಕ್ತವಾಗುವ ಕೃತಿ. ಒಂದು ವಿಶೇಷವೆನಿಸುವ ಶೈಲಿಯ ಚುಕ್ಕಿಚಿತ್ರಗಳನ್ನು ರಚಿಸುತ್ತಿದ್ದೆ. ಆ ಚಿತ್ರಗಳನ್ನು ನೋಡಿದವರೆಲ್ಲ ನಾನೂ ಚುಕ್ಕಿಚಿತ್ರ ರಚಿಸಬೇಕು ಹೇಗೆ ಎಂದು ಕೇಳುತ್ತಿದ್ದರು. ಅನೇಕರಿಗೆ ಹೇಳುತ್ತಿದ್ದೆ. ಆದರೆ ಎಷ್ಟು ಜನರಿಗೆ ಅಂತ ಹೇಳೋದು. ಹಾಗಾಗಿ ಒಂದು ಪುಸ್ತಕವನ್ನು ಬರೆದೆ. ಅದರಲ್ಲಿ ಚುಕ್ಕಿಚಿತ್ರ ರಚಿಸಲು ಏನೇನು ಬೇಕು, ಪರಿಕರಗಳನ್ನು ಹೇಗೆ ಬಳಸುವುದು, ಇಂಕ್ ಎಂಥಾದ್ದು ಹೀಗೆ ಸವಿವರವನ್ನು ಬರೆದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ.
©2025 Book Brahma Private Limited.