ಭಾರತೀಯ ಸಂಸ್ಕೃತಿಯ ಮಹತ್ತ್ವ ಮತ್ತು ವೈಶಿಷ್ಟ್ಯ

Author : ವೈ.ಎಸ್.ಗಾಯತ್ರೀ

Pages 306

₹ 400.00




Year of Publication: 2012
Published by: ಉದಯ ಪ್ರಕಾಶನ
Address: #984, 11ನೇ ’ಎ’ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು- 560010
Phone: 08023389143

Synopsys

ಲೇಖಕಿ ವೈ.ಎಸ್.ಗಾಯತ್ರೀ ಅವರ ಅನುವಾದಿತ ಕೃತಿ-‘ಭಾರತೀಯ ಸಂಸ್ಕೃತಿಯ ಮಹತ್ತ್ವ ಮತ್ತು ವೈಶಿಷ್ಟ್ಯ’  ಮೂಲ ಎಸ್. ಕೆ. ಓಝಾ ಅವರು ಭಾರತೀಯ ಸಂಸ್ಕೃತಿಯನ್ನು ಕುರಿತು ಹಿಂದಿಯಲ್ಲಿ ರಚಿಸಿದ್ದ ಈ ಗ್ರಂಥವನ್ನು ಲೇಖಕಿಯು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೃತಿ ಕುರಿತು ಸಾಹಿತಿ ಎಸ್. ರಂಗನಾಥ್ ಅವರು, ‘ಭೂಮಿಕಾ, ಆಧುನಿಕ ಜೀವನ ಮತ್ತು ಸನ್ನಿಹಿತ ಸಮಸ್ಯೆಗಳು, ಆಧುನಿಕ ಸಮಸ್ಯೆಗಳ ಪರಿಹಾರಾನ್ವೇಷಣೆ, ಭಾರತೀಯ ಸಂಸ್ಕೃತಿಯ ವಿಶ್ವಸನೀಯತೆ, ಪರೀಕ್ಷೆ, ಮತ್ತು ವಿಶಿಷ್ಟತೆ, ಭಾರತೀಯ ಸಾಂಸ್ಕೃತಿಕ ಜ್ಞಾನದ ಅಡೆತಡೆಗಳು, ಭಾರತೀಯ ಸಂಸ್ಕೃತಿಯಲ್ಲಿನ ವಿವೇಚನೆ, ಮಾನವೀಯ ಸದ್ಗುಣಗಳು, ಮುಖ್ಯ ತತ್ತ್ವಗಳು, ಕರ್ಮ ಮತ್ತು ಜ್ಞಾನ, ಧರ್ಮದ ಅವಧಾರಣೆ ಮತ್ತು ಅದರ ಮಹತ್ವ, ಸಾಧಕನ ಜೀವನದ ವಿಶಿಷ್ಟ ಸಾಧನೆಗಳು, ಪರಮ ಪುರುಷಾರ್ಥದ ಸಿದ್ಧಿಗಾಗಿ ಮಾರ್ಗೋಪಾಯ, ಭಾರತೀಯ ಸಂಸ್ಕೃತಿಯ ಪ್ರಕಾರಮಾನ ತತ್ತ್ವ, ಸಾರಾಂಶ ಎಂಬ ಹದಿನಾರು ಅತ್ಯುಪಯುಕ್ತ ಶೀರ್ಷಿಕೆಗಳಿಂದ ಕೂಡಿದೆ. ದರ್ಶನ ಶಾಸ್ತ್ರಗಳು, ಶ್ರೀಮದ್ಭಾಗವತ ಮಹಾಪುರಾಣ, ಭಗವದ್ಗೀತೆ, ಶಾಂಕರ ಭಾಷ್ಯಯುತ ಉಪನಿಷತ್, ಬ್ರಹ್ಮಸೂತ್ರಭಾಷ್ಯಗಳ ಹಿನ್ನೆಲೆಯಲ್ಲಿ 65 ವರ್ಷಗಳಲ್ಲಿ ಬಂದಿರುವ ಗೋರಖ್ ಪುರ್ ಗೀತಾ ಪ್ರೆಸ್‌ನ “ಕಲ್ಯಾಣ” ಮಾಸಪತ್ರಿಕೆಯ ಆಧಾರವೇ ಅಲ್ಲದೆ, ಅನೇಕ ಸಾಧು ಸಂತರೊಡನೆ ನಡೆಸಿದ ಸಂವಾದದ ಹಿನ್ನೆಲೆಯಲ್ಲಿ, ಹಾಗೂ ಸ್ವಾನುಭವದಿಂದ ರಚಿತವಾದ ವಿಶ್ವಕೋಶದಂತಿರುವ ಪ್ರತಿಯೊಬ್ಬ ಭಾರತೀಯನೂ, ಅದರಲ್ಲೂ ಪ್ರಮುಖವಾಗಿ ಯುವ ಪೀಳಿಗೆಯವರು ಓದಿ, ಸ್ವಾನುಭವಕ್ಕೆ ತಂದುಕೊಳ್ಳಲು ಅತ್ಯುಪಯುಕ್ತವಾದ ಭಂಡಾರ ಈ ಕೃತಿಯಾಗಿದೆ ’ ಎಂದು ಪ್ರಶಂಸಿಸಿದ್ದಾರೆ. 

About the Author

ವೈ.ಎಸ್.ಗಾಯತ್ರೀ

ಹಿರಿಯ ಲೇಖಕಿ ವೈ.ಎಸ್.ಗಾಯತ್ರೀ ಅವರು ಸಂಸ್ಕೃತ ಅಧ್ಯಯನ-ಅಧ್ಯಾಪನಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಚಾಮರಾಜೇಂದ್ರ ಸಂಸ್ಕೃತ ಮಹಾ ಪಾಠ ಶಾಲೆಯಿಂದ ಸಾಹಿತ್ಯ ವಿದ್ವತ್ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನೂ ಪಡೆದಿರುತ್ತಾರೆ. ಅವರು ವನಿತಾ ರಾಮಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಚಿಸಿದ ಭಾರತೀಯ ಗಣಿತ ಶಾಸ್ತ್ರಸ್ಯ ವಿಶಿಷ್ಟಂ ಅಧ್ಯಯನಂ’ ಎಂಬ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿದೆ. ಬೆಂಗಳೂರಿನ ಶ್ರೀ ಬಾಲಾಜಿ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ 26 ವರ್ಷಗಳಿಂದ ಕಾರ್ಯನಿರ್ವಹಿಸಿದ್ದಾರೆ. ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ, ನಾದವೇದ ಅಧ್ಯಯನ ಕೇಂದ್ರ ...

READ MORE

Related Books