‘ಅಣುಭೋಧನಾ ತರಬೇತಿ ತಂತ್ರಗಳು’ ಕೃತಿಯು ಕೆ. ಸತ್ಯನಾರಾಯಣ ಸಿಂಗ್ ಅವರ ತಂತ್ರಗಾರಿಕೆ ಸಂಬಂಧಪಟ್ಟಂತಹ ಕೃತಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಡಿ. ಶಿವಪ್ಪ ಅವರು ಕೃತಿಯ ಕುರಿತು, ಲೇಖಕ ಆರಿಸಿಕೊಂಡಿರುವ ವಿಷಯ ಅತಿ ಕ್ಲಿಷ್ಟವಾದದ್ದು. ಇಂತಹ ಕಷ್ಟವಾದ ವಿಷಯವನ್ನು ತಿಳಿಗನ್ನಡದಲ್ಲಿ ಅರ್ಥವಾಗುವಂತೆ ಬರೆದದ್ದೂ ನಿಜಕ್ಕೂ ಶ್ಲಾಘನೀಯ. ಗ್ರಂಥದಲ್ಲಿ ಪಾರಿಭಾಷಿಕ ಶಬ್ಧಗಳ ಬಳಕೆ ಅರ್ಥಗರ್ಭಿತವಾಗಿದೆ. ಅರ್ಥಕ್ಕಾಗಿ ತಡಕಾಡದಂತೆ ಈ ಕೃತಿಯು ಈ ಓದುಗನನ್ನು ಸೆರೆಹಿಡಿದು ಓದಿಸಿಕೊಂಡು ಹೋಗುತ್ತದೆ. ಡಾ. ಸಿಂಗ್ ಅವರು ಗಳಿಸಿದ ಕನ್ನಡ ಭಾಷಾ ಸಾಮರ್ಥ್ಯ ಮೆಚ್ಚುವಂತಹುದು. ಒಟ್ಟಿನಲ್ಲಿ ಹೇಳುವುದಾದರೆ, ಡಾ. ಸತ್ಯನಾರಾಯಣ ಸಿಂಗ್ ಅವರು, ತಮ್ಮ ಆಳವಾದ ಅನುಭವ, ಉನ್ನತಮಟ್ಟದ ಬುದ್ಧಿ ಕೌಶಲ್ಯ ವಿಷಯದ ಬಗ್ಗೆ ‘ಇದಮಿತ್ತಂ’ ಎಂದು ಹೇಲುವ ಚತುರತೆ ಹಾಗೂ ದಿಟ್ಟನಿಲುವು, ಗಳಿಸಿದ ಸಂಶೋಧನಾ ಪ್ರವೃತ್ತಿ, ಹೇಳಬೇಕಾದದ್ದನ್ನು ನೇರವಾಗಿ ಹಾಗೂ ಮನಮುಟ್ಟುವಂತೆ ಹೇಳಲು ರೂಢಿಸಿಕೊಂಡ ಕಲೆ-ಇವೆಲ್ಲವನ್ನೂ ಹದವಾಗಿ ಬೆರೆಸಿ, “ಅಣುಭೋಧನಾ ತರಬೇತಿ ತಂತ್ರಗಳು” ಎಂಬ ಈ ಉನ್ನತ ಕೃತಿಯನ್ನು ರಚಿಸಿದ್ದಾರೆ ಎಂದಿದ್ದಾರೆ.
©2024 Book Brahma Private Limited.