ಅಂಜು ತಿವಾರಿ, ಕೆ.ಪಿ. ಕೃಷ್ಣನ್ ಮತ್ತು ರಸಿಕ್ ರವೀಂದ್ರ ಅವರ ಮೂಲ ಕೃತಿಯನ್ನು ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರು ಕನ್ನಡೀಕರಿಸಿದ ಕೃತಿ-ಅಂಟಾರ್ಕ್ಟಿಕದ ಕಥೆ .
ಏಳನೆಯ ಮಹಾಖಂಡ ಎಂದು ಕರೆಯುವ ಅಂಟಾರ್ಕ್ಟಿಕ ಯಾವೊಂದು ದೇಶಕ್ಕೂ ಸೇರದ ಭೂಮಿಯ ಮೇಲಿನ ಏಕೈಕ ಸ್ಥಳ. ಅದು ಶಾಂತಿ, ಪ್ರಶಾಂತತೆ ಮತ್ತು ವಿಜ್ಞಾನಕ್ಕೇ ಮೀಸಲಾದ ಖಂಡ. ಸದ್ಯದಲ್ಲಿ ಚಾಲ್ತಿಯಲ್ಲಿರುವ ಅಂಟಾರ್ಕ್ಟಿಕ ಒಪ್ಪಂದವು ನಮ್ಮ ಭೂತಾಯಿಗೆ ಸಂಬಂಧಿಸಿದಂತೆ ಈಗಿರುವ, ಪರಿಹಾರ ಕಾಣದ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಜಾಗತಿಕ ವಿಜ್ಞಾನಿ ಸಮುದಾಯಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ, ಜನಸಾಮಾನ್ಯರು, ವಿಶೇಷವಾಗಿ ತರುಣ ಜನಾಂಗ ಈ ಖಂಡದ ಬಗ್ಗೆ ಜಾಗತಿಕ ದೃಷ್ಟಿಕೋನದಿಂದ ಅದರ ಪಾತ್ರವೇನು ಎಂಬುದನ್ನು ಹೆಚ್ಚು ಅರಿತುಕೊಳ್ಳಬೇಕಾಗಿದೆ. ಮಕ್ಕಳಿಗೆ ಆಕರ್ಷಕವಾಗುವ ರೀತಿಯಲ್ಲಿ ಅಂಟಾರ್ಕ್ಟಿಕದ ಚಾರಿತ್ರಿಕ ಮತ್ತು ವೈಜ್ಞಾನಿಕ ಅಂಶಗಳನ್ನು ತಿಳಿಯಾಗಿ ಹಾಗೂ ಪರಿಣಾಮಕಾರಿಯಾಗಿ ನಿರೂಪಿಸುವುದು ಈ ಮಾಹಿತಿಕೋಶದ ಮೂಲ ಉದ್ದೇಶ. ಇಲ್ಲಿಯ ಅನುವಾದ ಮೂಲ ಕೃತಿಯೇನೋ ಎನ್ನುವ ಮಟ್ಟಿಗೆ ಕನ್ನಡದಲ್ಲಿ ಆ ಸೊಗಡನ್ನು ಹಿಡಿದಿಟ್ಟಿದೆ. ಪುಟಪುಟದಲ್ಲೂ ಯಥೇಚ್ಚವಾಗಿ ಚಿತ್ರಗಳನ್ನು ನೀಡಿದೆ. ಈ ಕೃತಿಗೆ ಬೆಲೆಯನ್ನು ನಿಗದಿ ಪಡಿಸಿಲ್ಲ.
©2024 Book Brahma Private Limited.