ಲೇಖಕ ಶ್ರೀನಿವಾಸ ಡಿ ಶೆಟ್ಟಿ ಅವರ ಗಣಿತ ಲೇಖನಗಳ ಸಂಗ್ರಹ ಅನಂತದೆಡೆಗೆ ಭಾಗ-1.ಕೃತಿಯಲ್ಲಿ ಲೇಖಕರೇ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಗಣಿತ ಲೇಖನಗಳನ್ನೊಳಗೊಂಡ ಪುಸ್ತಕವನ್ನು ಹೊರತರುವುದು ಸುಲಭದ ಮಾತಲ್ಲ. ಏಕೆಂದರೆ ಗಣಿತ ವಿಷಯಕ್ಕೆ ಆಂಗ್ಲ ಭಾಷೆಯಲ್ಲಿ ಸಿಗುವಷ್ಟು ಹೇರಳವಾಗಿ ಆಕರ ಗ್ರಂಥಗಳು ಕನ್ನಡದಲ್ಲಿ ಸಿಗುವುದಿಲ್ಲ. ಆದರೂ ಅನಂತದೆಡೆಗೆ ತಂಡವು ಕೆಲವು ವರ್ಷಗಳಿಂದ ಕನ್ನಡದಲ್ಲಿ ಗಣಿತ ಸಂಬಂಧಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ.ಈ ಪುಸ್ತಕವನ್ನು ಪ್ರೌಢಶಾಲಾ ಹಂತದ ಸಂಖ್ಯಾಶಾಸ್ತ್ರಕೆ, ಆಕರ ಗ್ರಂಥವಾಗಿ ಬಳಸಬಹುದು. ನಾರಾಯಣಸ್ವಾಮಿಯವರು ಇದನ್ನು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವ ನಿಟ್ಟಿನಲ್ಲಿ, ಲೇಖನ ಬರೆದಿರುವುದು ನಿಜಕ್ಕೂ ಮೆಚ್ಚುವಂತದ ಸಂಖ್ಯಾಶಾಸ್ತ್ರದ ಪೂರ್ಣ ಚಿತ್ರಣ ನೀಡುವಲ್ಲಿ ಬಹುಪಾಲು ಯಶಸ್ಸು ಗಳಿಸಿದ್ದಾರೆ. ಇದನ್ನು ಓದುಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸದುಪಯೋಗಪಡಿಸಿಕೊಂಡರೆ ಮಾತ್ರ ಇದರ ಸಾರ್ಥಕತೆ ಎಂದಿದ್ದಾರೆ.
©2024 Book Brahma Private Limited.