ಅಗಸ್ತ್ಯಾದಿಂದ ನಾಸಾದವರೆಗೆ

Author : ಲಿಂಗರಾಜ ರಾಮಾಪೂರ

Pages 113

₹ 80.00




Year of Publication: 2017
Published by: ಕರ್ನಾಟಕ ಇತಿಹಾಸ ಸಂಶೋಧನ ಮಂಡಳ
Address:  ರೊದ್ದ ರಸ್ತೆ, ಧಾರವಾಡ,  
Phone: 0836241131

Synopsys

ಲಿಂಗರಾಜ ವೀ. ರಾಮಾಪೂರ ಅವರ ಕೃತಿ-ಅಗಸ್ತ್ಯಾದಿಂದ ನಾಸಾದವರೆಗೆ. ವಿಜ್ಞಾನದ ಇತಿಹಾಸದ ದಾಹವನ್ನು ನೀಗಿಸುವ ವಿಜ್ಞಾನದಲೆದಾಟ. ಹೋದಲ್ಲೆಲ್ಲಾ ವಿಜ್ಞಾನದ ಕೌತುಕಗಳನ್ನು, ವಿಸ್ಮಯಗಳನ್ನು, ಅದರ ಇತಿಹಾಸವನ್ನು ತಿಳಿದುಕೊಳ್ಳುವ ವಿಜ್ಞಾನದ ದಾಹ. ವಿಜ್ಞಾನದ ಸೂಕ್ಷ್ಮ ಒಳಗಣ್ಣಿನಿಂದ ಪ್ರಪಂಚವನ್ನು ನೋಡುವ ಪುಟ್ಟ ಪ್ರಯತ್ನದ ಭಾಗ. “ಕೋಶ ಓದು ಇಲ್ಲವೇ ದೇಶ ಸುತ್ತು” ಎನ್ನುವಂತೆ ನಾನು ಓದುವುದಕ್ಕಿಂತ ಜ್ಞಾನದ ಹುಡುಕಾಟದಲ್ಲಿ ಅಲೆದದ್ದೇ ಹೆಚ್ಚು. ಮನುಷ್ಯ ನಿಸರ್ಗದ ಕೂಸಾಗಿದ್ದು ಅಲೆಯುವ ಸಂದರ್ಭಗಳಲ್ಲಿ ನಿಸರ್ಗವನ್ನು ಅರಿಯುತ್ತ ವಿಶೇಷ ಜ್ಞಾನವನ್ನು ಪಡೆಯುವ ಪ್ರಯತ್ನ ಮಾಡಿದ್ದೇನೆ. ಕರ್ನಾಟಕದ ಕೆಲವು ಪ್ರದೇಶಗಳು, ಹೊರ ರಾಜ್ಯದ ಕೆಲ ಸ್ಥಳಗಳು ಅಲ್ಲದೇ ಹೊರ ದೇಶದ ಕೆಲ ಸ್ಥಳಗಳಲ್ಲಿ ವಿಜ್ಞಾನದ ವಿದ್ಯಮಾನಗಳು ಹಾಗೂ ವಿಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲ ಪ್ರಯತ್ನಗಳು ಹೇಗೆಲ್ಲಾ ನಡೆಯುತ್ತಿವೆ ಎಂಬುದನ್ನು ತೋರಿಸುವ ಪುಟ್ಟ ಪ್ರಯತ್ನವೇ ಈ ಪುಸ್ತಕ “ಅಗಸ್ತ್ಯದಿಂದ ಅಮೆರಿಕದ ನಾಸಾದವರೆಗೆ” ವಿಜ್ಞಾನದಲೆದಾಟ ಎನ್ನುತ್ತಾರೆ ಲೇಖಕರು. .

 

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Related Books