ಆವಿಷ್ಕಾರದ ಹರಿಕಾರ

Author : ವಿಶ್ವೇಶ್ವರ ಭಟ್

Pages 266

₹ 350.00




Year of Publication: 2021
Published by: ವಿಶ್ವವಾಣಿ ಪುಸ್ತಕ
Address: ನಂ-1867, ನಿಸರ್ಗ ಸೆರೆನಿಟಿ ಕಾಂಪ್ಲೆಕ್ಸ್‌ ರಸ್ತೆ, ಬಿಇಎಂಎಲ್‌ ಬಡಾವಣ, 5ನೇ ಹಂತ, ರಾಜರಾಜೇಶ್ವರಿನಗರ ಬೆಂಗಳೂರು-560098
Phone: 8431007267

Synopsys

ಹಿರಿಯ ಪತ್ರಕರ್ತ ಲೇಖಕ ವಿಶ್ವೇಶ್ವರ ಭಟ್ ಅವರ ಅನುವಾದಿತ ಕೃತಿ- ʻಆವಿಷ್ಕಾರದ ಹರಿಕಾರ: ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿʼ ಮೂಲ ಅಮೇರಿಕದ ಉದ್ಯಮಿ ಲೇಖಕ ಅವಿ ಯೋರಿಶ್  ರಚಿಸಿರುವ Thou Shalt Innovate ಕೃತಿ. ವಿಶ್ವದ 40 ಕ್ಕೂ ಹೆಚ್ಚೂ ಭಾಷೆಗಳಿಗೆ ಅನುವಾದಗೊಂಡಿದೆ. ಇಸ್ರೇಲ್ ಎಂಬ ಪುಟ್ಟ ದೇಶ ಜಗತ್ತನ್ನು ಸುಂದರ ತಾಣವನ್ನಾಗಿ ರೂಪಿಸಲು ಪಟ್ಟು ಹಿಡಿದು ಕುಳಿತಿರುವುದು ಏಕೆ? ಜಗತ್ತಿನಾದ್ಯಂತ ನೂರಾರು ಕೋಟಿ ಜನರ ಬದುಕನ್ನು ಇಸ್ರೇಲಿನ ಅದ್ಭುತ ಆವಿಷ್ಕಾರಗಳು ಹೇಗೆ ಬದಲಿಸುತ್ತಿವೆ ಎಂಬುದನ್ನು ಈ ಕೃತಿ ಕಟ್ಟಿಕೊಡುತ್ತದೆ.

ವಿವಿಧ ಆವಿಷ್ಕಾರಗಳನ್ನು ನಡೆಸಿ ವಿಶ್ವಕ್ಕೇ ಮಾದರಿಯಾಗಿ, ದಾರಿ ದೀಪವೂ ಆಗಿರುವ ನಾನಾ ಆವಿಷ್ಕಾರಗಳನ್ನು ಮಾಡಿರುವ 15 ಸಾಧಕರನ್ನು ಲೇಖಕರು ಪರಿಚಯಿಸಿದ್ದಾರೆ. ಈ ಪುಸ್ತಕ ಕೇವಲ ಸಾಧಕರ ಪರಿಚಯದ ದಾಖಲೆಯಾಗದೆ, ಅವರ ಸಾಧನೆಯ ಹಾದಿ ಅವರು ಅದೆಷ್ಟು ಕಷ್ಟಪಟ್ಟು ಗುರಿಯನ್ನು ಮುಟ್ಟಿದ್ದಾರೆ ಎಂಬುದನ್ನು  ವಿವರಿಸಿದ್ದಾರೆ. ಜಗತ್ತಿಗೆ ಇಸ್ರೇಲ್‌ ನೀಡಿದ ಕೊಡುಗೆಗಳನ್ನ ವಿವರಿಸಿದ್ದಾರೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books