ಸಂಶೋಧನಾ ಲೇಖಕಿಯಾದ ಗೀತಾ ಕೃಷ್ಣಮೂರ್ತಿಯವರು ಕಾನೂನು, ವ್ಯಕ್ತಿತ್ವ ವಿಕಸನ, ಸಂವಿಧಾನದ ಕುರಿತಾಗಿ ಉತ್ತಮ ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಎಲ್.ಎಲ್.ಬಿ, ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. 1951 ಅಕ್ಟೋಬರ್ 23ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.
ಮಹಿಳೆ ಮತ್ತು ಕಾನೂನು - ನವ ಸಾಕ್ಷರರಿಗಾಗಿ, ವಿವಾಹ ಕಾನೂನು ಮಹಿಳೆ, ಕಾನೂನು ಮತ್ತು ರಾಜಕಾರಣ, ಮಹಿಳಾ ಹಕ್ಕುಗಳುಮಾನವ ಹಕ್ಕುಗಳ ನೆಲೆಯಲ್ಲಿ, ಮಹಿಳೆ ಸಮಾಜ ಮತ್ತು ಕಾನೂನು (ಲೇಖನಗಳ ಸಂಗ್ರಹ) ವ್ಯಕ್ತಿತ್ವ ವಿಕಸನ ಮತ್ತು ಕಾನೂನು, ಮೂಲಭೂತ ಹಕ್ಕುಗಳು ಒಂದು ಕಿರುಪರಿಚಯ, ಕೌಟುಂಬಿಕ ಕಾನೂನು ಸಂಗಾತಿ, ಕಾನೂನು ಕೈಪಿಡಿ, ಮಹಿಳೆ ಕಾನೂನು ಮತ್ತು ನ್ಯಾಯ (ಸಂಶೋಧನ ಮಹಾಪ್ರಬಂಧ), ವಿವಿಧ ನಿಯತಕಾಲಿಕೆಗಳು ಹಾಗೂ ಪತ್ರಿಕೆಗಳಲ್ಲಿ 80ಕ್ಕೂ ಹೆಚ್ಚು ಕಾನೂನು ಲೇಖನಗಳನ್ನು ಬರೆದಿದ್ಧಾರೆ.