ಕಲಿಕೆಯ ಹೆಜ್ಜೆಗಳು-ಆರ್. ಬಿ. ಗುರುಬಸವರಾಜ ಅವರ ಕೃತಿ. ಶಾಲೆಯಲ್ಲಿ ಮಾತ್ರ ಶಿಕ್ಷಣ ದೊರೆಯುತ್ತದೆಯೇ? ಪೋಷಕರು ಮಕ್ಕಳಿಗೆ ಹೇಗೆ ಶಿಕ್ಷಣ ನೀಡಬಹುದು? ಕಲಿಕೆಯ ವೈವಿಧ್ಯಮಯ ರೂಪಗಳಾವುವು? ಮಕ್ಕಳ ಕುತೂಹಲ ಮತ್ತು ಆಸಕ್ತಿಯುತ ಕಲಿಕೆಗೆ ಪೋಷಕರು ಹೇಗೆ ಬೆಂಬಲ ನೀಡಬಹುದು? ಮಗು ಕಲಿಕೆಯಲ್ಲಿ ಪ್ರಯಾಸ ಪಡುವುದನ್ನು ತಪ್ಪಿಸುವ ಮಾರ್ಗಗಳೇನು? ಮಕ್ಕಳ ಕಲಿಕಾ ಅನುಭವಗಳನ್ನು ಗಟ್ಟಿಗೊಳಿಸುವುದು ಹೇಗೆ? ಮಕ್ಕಳ ಮನಸ್ಸನ್ನು ಅರಿಯುವ ವಿಧಾನಗಳು ಯಾವುವು? ಮನೆಯಲ್ಲಿ ಮಗುಸ್ನೇಹಿ ವಾತಾವರಣ ಏಕಿರಬೇಕು ಮತ್ತು ಹೇಗಿರಬೇಕು? ಮಕ್ಕಳ ಭವಿಷ್ಯದ ಕಲಿಕೆಯನ್ನು ಉನ್ನತೀಕರಿಸುವ ಅಂಶಗಳನ್ನು ಪಾಲಕರು ಹೇಗೆ ಅನುಸರಿಸಬೇಕು? ಮಕ್ಕಳ ಕಲಿಕಾ ಕೊರತೆಗಳನ್ನು ಪಾಲಕರು ಪತ್ತೆ ಹಚ್ಚುವುದು ಹೇಗೆ? ಮಕ್ಕಳಲ್ಲಿ ಒತ್ತಡ ರಹಿತ ಮನೋವಿಕಾಸ ಹೇಗೆ? ಪರೀಕ್ಷೆಗಳು ಕೇವಲ ಅಂಕ ಗಳಿಸುವ ಪ್ರಕ್ರಿಯೆಗಳೆ? ಮುಂತಾದ ಪ್ರಶ್ನೆಗಳಿಗೆ ಈ ಪುಸ್ತಕ ಮಾರ್ಗದರ್ಶಿ. ಇದು ಕೇವಲ ಪಾಲಕರಿಗಷ್ಟೇ ಅಲ್ಲ ಶಿಕ್ಷಕರಿಗೂ ಶಿಕ್ಷಣಾಸಕ್ತರಿಗೂ, ಟಿ.ಇ.ಟಿ ಮತ್ತು ಸಿ.ಇ.ಟಿ ಪರೀಕ್ಷಾರ್ಥಿಗಳಿಗೂ ಉಪಯುಕ್ತ.
©2024 Book Brahma Private Limited.