ಗಣಿತ ಕಲಿಕೆಗೆ ಎಷ್ಟೊಂದು ಆಟಗಳು ಎಂಬ ಕೃತಿಯು ಗಣಪತಿ ಹೆಗಡೆ ಮೂಡ್ಕಣಿಯವರ ಕೃತಿಯಾಗಿದೆ. ಪ್ರತಿಯೊಬ್ಬನಿಗೂ ವಿದ್ಯಾರ್ಥಿ ಜೀವನವು ಅನುಭವಗಳನ್ನು ಕಟ್ಟಿಕೊಡುವ ಸಂದರ್ಭವಾಗಿದೆ. ಕಲಿಕೆಯನ್ನು ಮಧುರವಾಗಿಸುವತ್ತ ಹಲವಾರು ವಿಧಾನಗಳನ್ನು ಸರಕಾರವೂ, ವಿದ್ಯಾ ಇಲಾಖೆಯೂ ಅನೇಕ ಬಗೆಯ ಕಾರ್ಯಕ್ರಮಗಳ ಮೂಲಕ ಜಾರಿಗೊಳಿಸುತ್ತಿವೆ. ಈ ನಿಟ್ಟಿನಲ್ಲಿ 'ಗಣಿತ ಕಲಿಕೆಗೆ ಎಷ್ಟೊಂದು ಆಟಗಳು ನನ್ನ ಪ್ರಯತ್ನವಾಗಿ ನಿಮ್ಮ ಮುಂದಿದೆ. ಗಣಿತ ಕಲಿಸುವಾಗ ಶಿಕ್ಷಕರು ಎದುರಿಸುವ ಸಮಸ್ಯೆಯೆಂದರೆ, ಪರಿಕಲ್ಪನೆಯೊಂದನ್ನು ರೂಢಿಗತಗೊಳಿಸುವುದು ಹೇಗೆ ಎಂಬುದು, ಪರಿಕಲ್ಪನೆಯೊಂದನ್ನು ರೂಢಿಸುವುದು ಗಣಿತ ಕಲಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಅಭ್ಯಾಸದಿಂದ ಮಾತ್ರ ಇದು ಸಾಧ್ಯ. ವಿದ್ಯಾರ್ಥಿಗಳಿಗೆ ಈ ಅಭ್ಯಾಸದ ಹಾದಿ ಇಷ್ಟವಾದಾಗ ಇದರ ಫಲ ನೂರ್ಮಡಿಯಾಗುತ್ತದೆ. ಗಣಿತ ಅಭ್ಯಾಸಕ್ಕಾಗಿ ಆಟಪಾಠದ ಹಾದಿ ಈ ಪುಸ್ತಕದ ಉದ್ದೇಶವಾಗಿದೆ ಎಂದು ಲೇಖಕರು ಹೇಳಿದ್ದಾರೆ.
©2024 Book Brahma Private Limited.